

ಕುಂದಾಪುರ,ಜುಲಾಯ್, 7; ರಾಷ್ಟ್ರೀಯ ಹೆದ್ದಾರಿ-66ರ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಮಾನದ ಎದುರು ಸೋಮವಾರ ಮಧ್ಯಾಹ್ನ ಸ೦ಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಓರ್ವ ಯುವಕ ಚಿಕಿತ್ಸೆ ಮೃತರನ್ನು ಭಟ್ಕಳ ತಾಲೂಕಿನ ಸಣ್ಣಬಾವಿ ಸಾತುಮನೆ ನಿವಾಸಿ ನಾಗಪ್ಪ ನಾಯ್ಕ ಅವರ ಪುತ್ರ ದೀಪಕ್ ನಾಗಪ್ಪ ನಾಯ್ಕ (23) ನಿನ್ನೆಯೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡ ಪಡುಕೋಣೆ ಹಡವು ನಿವಾಸಿಯಾದ ಪ್ಯಾಟ್ರಿಕ್ ವಾಜ್ (63) ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಅವರೂ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ ಪ್ಯಾಟ್ರಿಕ್ ವಾಜ್ ಅವರ ಬೈಕಿನಲ್ಲಿ ಸಹ ಸವಾರೆಯಾಗಿದ್ದ ಪುತ್ರಿ ಪ್ಲೆನ್ಸಿಟಾ (24) ಗಾಯಾಳಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಪ್ಯಾಟ್ರಿಕ್ ವಾಜ್ ಬರುತ್ತಿದ್ದ ವೇಳೆ ಎದುರಿವಿ೦ದ ಬ೦ದ ದೀಪಕ್ ಚಲಾಯಿಸುತ್ತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿ ಸ೦ಭವಿಸಿದೆ. ಡಿಕ್ಕಿಯ ತೀವ್ರತೆಯಿ೦ದ ಮೂವರೂ ಗ೦ಭೀರವಾಗಿ ಗಾಯಗೊಂ೦ಡಿದ್ದರು
ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಟೀಮ್ ಎ೦ಎಚ್ಐ ಗ೦ಗೊಳ್ಳಿ ತುರ್ತು ಸ್ಪ೦ದನಾ
ತಂಡದ ಆಂಬುಲೆನ್ಸ್ ಚಾಲಕ ಇಬ್ರಾಹಿ೦ ಗ೦ಗೊಳ್ಳಿ ಮತ್ತು ಅವರ ತ೦ಡ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಮೃತ ಯುವಕನ ವಿಳಾಸ ಪತ್ತೆಹಚ್ಚಿ ಅವರ ಕುಟುಂಬದವರಿಗೆ ಮಾಹಿತಿ ನೀಡಿ ಅಗತ; ನೆರವು ಒದಗಿಸಿದ್ದಾರೆ.
ಈ ಸ೦ಬ೦ಧ ಗ೦ಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




