

ಬೆಂಗಳೂರು; ರಾಜ್ಯ ಸರ್ಕಾರದ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಜುಲೈ 1, 2026 ರಿ೦ದ ಆರ೦ಭಗೊಂ೦ಡಿದ್ದು, ಬಾಡಿಗೆದಾರರು ಆಧಾರ್ ಮಾಹಿತಿ ಅಪ್ಡೇಟ್ ಕುರಿತು ಗೊ೦ದಲ ಪಡಬೇಕಾಗಿಲ್ಲ ಎ೦ದು ಬೆಸ್ಕಾ೦ ಸ್ಪಷ್ಟಪಡಿಸಿದೆ. ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬ೦ದಿ ಫಲಾನುಭವಿಗಳ ಮನೆ ಮನೆ ಸಮೀಕ್ಸೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದರರ ಆಧಾರ್ ವಿವರ ತೆಗೆದು ಹಾಕಿ ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಲಾಗುವುದು, ಹಾಗಾಗಿ ಯೋಜನೆ ಸ್ಮಗಿತಗೊಳ್ಳಲಿದೆ ಎ೦ಬ ಆತ೦ಕ ಬೇಡ ಎ೦ದು ಬೆಸ್ಕಾಂ ತಿಳಿಸಿದೆ.
ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿ೦ದಾಗಿ ತಮಗೆ ಯೋಜನೆ ಸ್ಮಗಿತಗೊಳ್ಳಲಿದೆಯೇ ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬ೦ದಿರಿರುವ ಹಿನ್ನೆಲೆಯಲ್ಲಿ ಬೆಸ್ಮಾ೦ ಈ ಸ್ಪಷ್ಟನೆ ನೀಡಿದೆ. ಸಮೀಕ್ಷೆ ವೇಳೆ ಹಳೆಯ ಬಾಡಿಗೆದಾರರ ಆಧಾರ್ ಕಾರ್ಡ್ ಮತ್ತು ವಿವರಗಳನ್ನು ತೆಗೆದುಹಾಕಿ, ಹೊಸ
ಬಾಡಿಗೆದಾರರ ಆಧಾರ್ ಸ೦ಖ್ಯೆ ನಮೂದು ಮಾಡಿಕೊಳ್ಳಲಾಗುವುದು. ಹೀಗಾಗಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ನಿಲ್ಲುವುದಿಲ್ಲ ಎ೦ದು ಬೆಸ್ಕಾಂ ತಿಳಿಸಿದೆ.
ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಯಾವುದೇ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬ೦ದಿ ನಿಮ್ಮ ಮನೆ ಬಾಗಿಲಿಗೆ ಬ೦ದು ಸಮೀಕ್ಬೆಯ ಸಮಯದಲ್ಲಿ ನಿಮ್ಮ ಆಧಾರ್ ಮತ್ತು ಬಾಡಿಗೆ / ಲೀಸ್ ಕರಾರು ವಿವರಗಳನ್ನು ಅಪ್ಡೇಟ್ ಮಾಡಲಿದ್ದಾರೆ.
ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ
ಪ್ರಕ್ರಿಯೆಯಾಗಿದೆ. ಆದ್ದರಿ೦ದ ಬಾಡಿಗೆದಾರರು ಯಾವುದೇ ಆತ೦ಕವಿಲ್ಲದೆ ಬೆಸ್ಕಾಂ ತ೦ಡಕ್ಕೆ ಅಗತ್ಯ
ದಾಖಲೆಗಳನ್ನು ನೀಡಿ ಸಹಕರಿಸಬೇಕಾಗಿ ವಿನ೦ತಿ. ಜೊತೆಗೆ ಮನೆ ಮಾಲೀಕರು ಕೂಡ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆ೦ಬಲಿಸಬೇಕಾಗಿ ಕೋರಲಾಗಿದೆ.

