

ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀ ಶಾರದಾ ಕಾಲೇಜು ಬಸ್ರೂರಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಯವರು ಆಗಮಿಸಿ ಮಕ್ಕಳಿಗೆ ಯೋಗದ ಕುರಿತು ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿಸಿದರು. ಯೋಗವು ನಮಗೆ ದೈಹಿಕ, ಮಾನಸಿಕ ಶಾಂತಿಯನ್ನು ಕೊಡುತ್ತದೆ. ಯೋಗವನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ಯೋಗ ಪ್ರಾಣಾಯಾಮದ ಮೂಲಕ ಮಕ್ಕಳು ತಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕು. ಯೋಗದಿಂದ ಆಯಾಸವಿಲ್ಲ.ಯೋಗದಿಂದ ದಣಿವಿಲ್ಲ ಎಂದರು. ಜೊತೆಗೆ ಯೋಗದ ಕೆಲವೊಂದು ಸರಳ ಪ್ರಾತ್ಯಕ್ಷಿಕೆಯನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢಶಾಲಾ ಸಂಯೋಜಕ ಶಿಕ್ಷಕಿಯಾದ ಶ್ರೀಮತಿ ಬೇಬಿ ಯವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಆರೋಗ್ಯದ ಸಮಸ್ಯೆ ಉದ್ಭವಿಸಿದೆ. ಹಾಗಾಗಿ ಮಾನಸಿಕವಾಗಿ ದೈಹಿಕವಾಗಿ ಸದೃಡವಾಗಿಡಲು ಯೋಗ ಮುಖ್ಯ ಎಂದರು.
ತುಳಸಿ ವಿದ್ಯಾಮಂದಿರದ ಯೋಗ ಶಿಕ್ಷಕರಾದ ಶ್ರೀ ದಿಲೀಪ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಯೋಗದ ಆಸನಗಳನ್ನು ಪ್ರದರ್ಶಿಸಿದರು.
ವಿದ್ಯಾರ್ಥಿನಿಯರಾದ ಸೃಷ್ಟಿ ಶೆಟ್ಟಿ ಹಾಗೂ ಸರಯೂ ಯೋಗದ ಮಹತ್ವದ ಕುರಿತು ಭಾಷಣಗೈದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮಾನ್ವಿ ಎಸ್ ಆಚಾರ್ಯ ನಿರೂಪಿಸಿದರು. ವಿದ್ಯಾರ್ಥಿ ಶ್ರೇಯಸ್ ಸ್ವಾಗತಿಸಿ, ಕುಮಾರಿ ಸಾನ್ವಿ ದೇವಾಡಿಗ ವಂದಿಸಿದರು.



