


ಶ್ರೀನಿವಾಸಪುರ : ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರಿಗೆ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿಯಲ್ಲಿ ಗೃಹ ನಿರ್ಮಾಣ ಮಾಡಿಕೊಡಲು ಜಿಲ್ಲಾಧಿಕಾರಿಗಳನ್ನು ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಬಾಸ್ಕರ್ ಒತ್ತಾಯಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಪುರಸಭೆಯ ಪೌರಕಾರ್ಮಿಕರಿಗೆ ವಸತಿ ಹಾಗು ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸುವ ಸರ್ಕಾರದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿಯಲ್ಲಿ 30 ಪೌರಕಾರ್ಮಿಕರಿಗೆ ಎಹೆಚ್ಪಿ ಘಟಕದಡಿ ಗೃಹ ನಿರ್ಮಾಣ ಮಾಡಲು ಈಗಾಗಲೇ ಜಿಲ್ಲಾ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ 32 ನೇ ರಾಜ್ಯ ಮಟ್ಟದ ಸಮಿತಿಯ ಸಭೆ ನಡವಳಿಕೆಯಂತೆ ಅನುಮೋದನೆಯಾಗಿ ರಾಜ್ಯಪಾಲರಿಂದ ಅಧಿಕೃತ ಅನುಮೋದನೆಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದಲ್ಲಿ ಸುಸರ್ಜಿತವಾದ ಮನೆಗಳನ್ನು ನಿರ್ಮಿಸಿಕೊಡಲು ನಿರ್ದೇಶಿಲಾಗಿರುತ್ತದೆ. ಅದ್ದರಿಂದ ಪಟ್ಟಣದ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಕಾರ್ಮಿಕರಿಗೆ ವಸತಿಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸದಸ್ಯರಾದ ಸಂಜಯ್ ಸಿಂಗ್, ನಾಗೇಶ್ಕುಮಾರ್ , ಮಾಜಿ ನಾಮಿನಿ ಸದಸ್ಯ ಎನ್.ಹೇಮಂತ್, ಪೌರಕಾರ್ಮಿಕರಾದ ಶಂಕರಪ್ಪ, ಲಕ್ಷ್ಮಮ್ಮ, ಟಿ.ವರಲಕ್ಷ್ಮಿ, ಪಿ.ಲಕ್ಷ್ಮಮ್ಮ, ವಿ.ರಾಜೇಶ್, ನಾಗೇಶ್ ಇದ್ದರು.

