

ಕುಂದಾಪುರ; ಪುರಸಭೆ ವ್ಯಾಪ್ತಿಯ ಮಂಗಳೂರು ಟೈಲ್ಸ್ ವಾರ್ಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಂಗನಹಿತ್ತಲು ಬಳಿ , ಕಳೆದ ಮೂರು ದಿನಗಳಿಂದ ಸುರಿದ ನಿರಂತರ ಮಳೆಯಿಂದ ಮನೆಗಳ ಒಳಗೆ ನೀರು ತುಂಬುವ ಪರಿಸ್ಥಿತಿ ಉಂಟಾಯಿತು. ಶ್ರೀ ವೆಂಕಟೇಶರವರ ಮನೆಯ ಹತ್ತಿರ ನೀರು ಹರಿಯಲು ಅವಕಾಶವಿಲ್ಲದ ಕಾರಣ ನೀರಿನ ಪ್ರವಾಹದಿಂದ ಆತಂಕದ ವಾತಾವರಣ ವಾರ್ಡಿನ ಜನರಲ್ಲಿ ಮೂಡಿತು.
ಸಮಸ್ಯೆಯನ್ನು ಅರಿತ ಸ್ಥಳೀಯ ನಿವಾಸಿ , ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲೋ ರವರು, ಬ್ಲಾಕ್ ಕಾಂಗ್ರೆಸ್ ಕಚೇರಿಗೆ ವಿಷಯವನ್ನು ತಿಳಿಸಿ , ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣರ ಜೊತೆ , ಕುಂದಾಪುರ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ , ರಾಘವೇಂದ್ರ ರವರನ್ನು ಸಂಪರ್ಕಿಸಿದ್ದರು. ಪುರಸಭೆ ಆಡಳಿತ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ , ಪ್ರಕಾಶ್ ಮತ್ತು ಇತರರು , ಪೌರಕಾರ್ಮಿಕರ ತಂಡ ಮತ್ತು ಹಿಟಾಚಿಯ ಜಂಟಿ ಕಾರ್ಯಾಚರಣೆಯಿಂದ ನೀರು ಹರಿಯಲು ಅವಕಾಶ ಮಾಡಿಕೊಟ್ಟು ಸಮಸ್ಯೆ ಪರಿಹರಿಸಲು ಸಹಕರಿಸಿದರು.



