


ಶ್ರೀನಿವಾಸಪುರ : ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡಿ, ಮತದಾರನ ಋಣವನ್ನು ತೀರಿಸುತ್ತಾ , ಮತದಾರನು ನೀಡಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ಗುರುವಾರ ವಿವದಡೆ 9 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಹಿನ್ನೆಲೆಯಲ್ಲಿ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನ ಕಾಂಪೌಡ್ ನಿರ್ಮಿಸಲು ಈಗಾಗಲೇ 30 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು . ಅಲ್ಲದೆ ಕಾಲೇಜು ಆವರಣದಲ್ಲಿ ಹಳೆ ಕಟ್ಟಡಗಳನ್ನು ಇನ್ನು ಒಂದೂವರೆ ತಿಂಗಳಲ್ಲಿ ತೆರೆವುಗೊಳಿಸಲಾಗುವುದು.
ಇನ್ನು ಪಟ್ಟಣದಲ್ಲಿ 15 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನ ಮಾಡಲಾಗುವುದು ಈಗಾಗಲೇ 9ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನ ಪ್ರಾರಂಭಿಸಲಾಗಿದೆ. ಇನ್ನು ಉಳಿದಂತೆ 6 ಕೋಟಿಯನ್ನ ಬಳಸಿಕೊಂಡು ಎಲ್ಲಿ ಎಲ್ಲಿ ಕಾಮಗಾರಿಗಳು ಅವಶ್ಯಕತೆ ಇದೆಯೋ ಅದನ್ನ ಬಳಿಸಿಕೊಳ್ಳಲಾಗುವುದು. ಪಟ್ಟಣದಲ್ಲಿನ ಕೆಲ ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ಪತ್ರಕರ್ತರು ಗಮನ ಸಳೆದಾಗ ಅವುಗಳನ್ನ ಒತ್ತುವರಿ ತರೆವುಗೊಳಿಸಿ, ರಾಜುಕಾಲವೆಗಳನ್ನು ಸ್ವಚ್ಚ ಮಾಡಲು 5 ಕೋಟಿ ಅನುದಾನವನ್ನು ಬಳಸಲಾಗುವುದು.
ಪಟ್ಟಣದ ರಂಗ ರಸ್ತೆ, ಗಫಾರ್ಖಾನ್ ಮೊಹಲ್ಲಾ, ಅಂಬೇಡ್ಕರ್ ಪಾಳ್ಯ ಬಡವಾಣೆಗಳಿಗೆ ಸಂಬAದಿಸಿದAತೆ ಸಿಸಿ ರಸ್ತೆ ಕಾಮಗಾರಿಗಳು, ಭೂಮಿ ಪೂಜೆ ನೆರವೇರಿಸಿದರು. ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಲ್ಯಾಂಡ್ ರ್ಮಿ ಸಿಬ್ಬಂದಿ ಶ್ರೀನಿವಾಸ್, ಮುಖಂಡರಾದ ಶ್ರೀನಿವಾಸಪ್ಪ, ಪೂಲ್ಶಿವಾರೆಡ್ಡಿ, ಪಾತಪೇಟ ಮಂಜುನಾಥರೆಡ್ಡಿ, ಮುತಕಪಲ್ಲಿಸರ್ಧಾರ್, ಅಂಬೇಡ್ಕರ್ ಪಾಳ್ಯ ಸಿ. ರವಿ, ಸಿ. ಮುನಿಯಪ್ಪ, ರಾಘವರೆಡ್ಡಿ, ಮನು, ಪ್ರಸನ್ನ, ಆಟೋ ಜಗ್ಗು ಎಸ್ಎನ್ ಆರ್ ಬಾಬುರೆಡ್ಡಿ, ಶ್ರೀನಾಥಬಾಬು, ಕೋಡಿಪಲ್ಲಿ ಶ್ರೀನಿವಾಸರೆಡ್ಡಿ, ಅಮರನಾಥ್, ಸತ್ಯಣ್ಣ, ಮಂಜು, ಅಪ್ಪೂರು ರಾಜು, ಗುತ್ತಿಗೆದಾರ ರಾಜಣ್ಣ, ಆನಂದರೆಡ್ಡಿ, ಬಿಂದು ಶ್ರೀನಿವಾಸರೆಡ್ಡಿ ಇದ್ದರು.

