

ಕುಂದಾಪುರ; ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೆಯ ಶೈಕ್ಷಣಿಕ ಶಾಲೆಯ ಶೈಕ್ಷಣಿಕ ವರ್ಷದ ಹಲವಾರು ಕ್ಲಬ್ಸ್ ಗಳನ್ನು 08-06- 2026 ರಂದು ಉದ್ಘಾಟಿಸಲಾಯಿತು.
ಇವುಗಳಲ್ಲಿ ಸಾಂಸ್ಕೃತಿಕ ಕ್ಲಬ್ ಭಾಷಾ ಕ್ಲಬ್ ಆಟೋಟ ಕ್ಲಬ್ ವಿಜ್ಞಾನ ಕ್ಲಬ್ ಗಣಿತ ಕ್ಲಬ್ ಕಲಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು ಈ ಕಾರ್ಯಕ್ರಮಕ್ಕೆ ಕುಂದಾಪುರದ ಆರತಿ ಆಪ್ಟಿಕಲ್ಸ್ ನ ಮಾಲೀಕರಾದ ಶ್ರೀಮತಿ ಆರತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ‘ಮಕ್ಕಳ ಪ್ರತಿಭೆಯನ್ನು ಪ್ರಚುರ ಪಡಿಸಲು ಅವರಿಗೊಂದು ವೇದಿಕೆಯ ಅಗತ್ಯವಿದೆ , ಅದಕ್ಕೆ ಈ ಕ್ಲಬ್ ಗಳು ಖಂಡಿತ ಮನ್ನಣೆಯನ್ನ ಒದಗಿಸುತ್ತದೆ’ ಎಂದು ತಮ್ಮ ಅತಿಥಿ ಭಾಷಣದಲ್ಲಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕುಂದಾಪುರ ಸಿ ಎಸ್ ಐ ಕೃಪಾ ಚರ್ಚಿನ ಧರ್ಮಗುರುಗಳಾದ ರೆವರೆಂಡ್ ಇಮಾನುಯಲ್ ಜಯಕರರವರು ಮಕ್ಕಳಿಗೆ ಕ್ಲಬ್ಬ್ಗಳನ್ನು ಮಾಡಿಸುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸಬಹುದು ಎಂದು ನುಡಿದರು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ರವರು ತಮ್ಮ ಪರಿಚಯ ಭಾಷಣದಲ್ಲಿ ಎಲ್ಲಾ ಮಕ್ಕಳು ಎಲ್ಲಾ ಕ್ಲಬ್ ಗಳಲ್ಲೂ ಭಾಗವಹಿಸಿ, ಶಿಕ್ಷಕರಿಂದ ಉತ್ತಮವಾದ ಪ್ರತಿಭೆಗಳನ್ನು ಸೃಷ್ಟಿಸುವಂಥಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನೇಹಾ ನಿರೂಪಿಸಿದಳು,. ತಮನ್ನಾ ಸ್ವಾಗತಿಸಿ, ಸಾಯಿ ಸಂಕಲ್ಪ ಧನ್ಯವಾದ ತಿಳಿಸಿದನು.
Kundapur; Clubs inaugurated at UBMC English Medium School

08-06- 2026 On Monday, UBMC English Medium School Kundapur inaugurated several clubs for the academic year 2026-27, including Cultural Club, Language Club, Sports Club, Science Club, Mathematics Club, and Art Club. Mrs. Aarti, owner of Aarti Opticals, Kundapur, was the chief guest for this program. In her guest speech, she said that children need a platform to showcase their talents and these clubs will definitely provide recognition for that platform. The president of the program, Reverend Emmanuel Jayakar, a religious teacher of CSI Krupa Church, Kundapur, informed that by organizing clubs for children, their participation in competitions in all fields can increase. Similarly, the school principal Mrs. Anita, in her introductory speech, wished that all children should participate in all clubs and create good talents from teachers. Student Neha presented the program. Tamanna welcomed the audience and Sai Sai Sankalpa thanked them.











