

ಕುಂದಾಪುರ,ಮೇ.5; ಕುಂದಾಪುರ ಭಾಗ್ಯೆವಂತೆ ರೋಜರಿ ಮಾತಾ ಚರ್ಚಿನಲ್ಲಿ ಮೇ 1 ರಂದು ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು. 5 ಮಕ್ಕಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಅ।ವಂ।ಪೌಲ್ ರೇಗೊ ಬಲಿದಾನ ಅರ್ಪಿಸಿ ಪ್ರಥಮ ಕ್ರಿಸ್ತ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿ ‘ಯೇಸು ಜೀವದಾಯಕ ರೊಟ್ಟಿಯಾಗಿರುವರು, ಪ್ರತೀ ಬಲಿ ಪೂಜೆಯಲ್ಲಿ ಯೇಸು ತನ್ನ ಶರೀರ ಮತ್ತು ತನ್ನ ರಕ್ತವನ್ನು ನಮಗೆ ನೀಡುವ ಮುಖಾಂತರ, ನಮಗೆ ಹೊಸ ಜೀವ ನೀಡುತ್ತಾರೆ, ಕ್ರಿಸ್ತ ಪ್ರಸಾದ, ನಮಗೆ ಆತ್ಮಕ್ಕೆ ಬೇಕಾದ ಮತ್ತು ನಮಗೆ ಮುಕ್ತಿ ಹೊಂದಲು ಬೇಕಾದ ಪ್ರಸಾದವಾಗಿದೆ’ ಎಂದು ಸಂದೇಶ ನೀಡಿ ಪ್ರಥಮ ಭಾರಿ ಪ್ರಸಾದ ಸಂಸ್ಕಾರ ಸ್ವೀಕರಿಸಿದ ಮಕ್ಕಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸಂತ ಮೇರಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ವಂ।ರೊಲ್ವಿನ್ ಫೆರ್ನಾಂಡಿಸ್, ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ।ಮ್ಯಾಕ್ಸಿಮ್ ಡಿಸೋಜಾ, ಮಕ್ಕಳಿಗೆ ಶಿಕ್ಷಣ ನೀಡಿದ ಧರ್ಮಭಗಿನಿ ಇವ್ಲಾ, ಶಿಕ್ಷಕಿ ಜೂಲಿಯೆಟ್ ಪಾಯ್ಸ್ ಮತ್ತು ಮಕ್ಕಳ ಬಂದು ಮಿತ್ರರು ಈ ಸಂಸ್ಕಾರದಲ್ಲಿ ಭಾಗಿಯಾದರು.



