

ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು 8 ಪುಟಾಣಿಗಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಬಲಿ ಪೂಜೆ ನಡೆಸಿ ಪರಮ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿದರು ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಕ್ರಿಸ್ತ ಪ್ರಸಾದದ ಮಹತ್ವ ಹಾಗೂ ಅದನ್ನು ಸೇವಿಸುವುದರಿಂದ ನಾವು ಕ್ರಿಸ್ತನನ್ನು ತಮ್ಮದಾಗಿಸಿಕೊಳ್ಳುತ್ತೇವೆ ಎಂದರು ಫಾದರ್ ಅರುಣ್ ಕೋತ್ ಭಾಗವಹಿದ್ದರು.






