

ಕೋಲಾರ:- ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಸಾಕಾರಗೊಳ್ಳಲು ಇಂದು ಶಿಕ್ಷಣ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಪರ್ವೀನ್ ತಾಜ್ ತಿಳಿಸಿದರು.
ಸೆಂಟ್ಆನ್ಸ್ ಶಾಲೆಯ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕೇಂದ್ರದಲ್ಲಿ ವಿಜ್ಞಾನ ಶಿಕ್ಷಕರ ಸಂಘದಿAದ ನಡೆದ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಸಾಲಿನಲ್ಲಿ ನಿವೃತ್ತರಾಗುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ, ಅವರೂ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರ ತತ್ವಗಳೇ ಶಿಕ್ಷಣ ಸಂಘಟನೆ, ಹೋರಾಟವಾಗಿದೆ ಎಂದ ಅವರು, ಅದರಲ್ಲಿ ಶಿಕ್ಷಣ ನೀಡುವ ಅತಿ ಮುಖ್ಯ ಹೊಣೆ ಶಿಕ್ಷಕರದ್ದಾಗಿದೆ ಎಂದ ಅವರು, ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಸಮಾನ ಶಿಕ್ಷಣ, ಸಾಮಾಜಿಕ ನ್ಯಾಯ ಉಳಿಯಲು ಸಾಧ್ಯವೆಂದರು.
ಅAಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ ನೀಡುವಂಥದ್ದು. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿಯಾಗಿದ್ದು, ಅವರ ತತ್ವಾದರ್ಶ ಮೈಗೂಡಿಸಿಕೊಂಡು ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಪ್ರತಿಯೊಬ್ಬರೂ ಕಾರಣರಾಗೋಣ ಎಂದರು.
ಅವರು ನೀಡಿರುವ ಸಂವಿಧಾನ ಇಂದು ದೇಶವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯಲು ದಾರಿದೀಪವಾಗಿದೆ ಎಂದ ಅವರು, ಅವರನ್ನು ಸ್ಮರಿಸುವುದು ಮಾತ್ರವಲ್ಲ ಅವರ ಆಶಯದಂತೆ ನಾವು ನಡೆದರೆ ಮಾತ್ರ ಅವರಿಗೆ ನೀಡುವ ಗೌರವ ಎಂದರು.
ಶಿಕ್ಷಣಾಧಿಕಾರಿ ಡಾ.ವೀಣಾ ಮಾತನಾಡಿ, ಇಂದು ವಿಶ್ವದಾದ್ಯಂತ ಹಾಡಿ ಹೊಗಳುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಸಂವಿಧಾನ ರೂಪುಗೊಳ್ಳಲು ಅಪಾರ ಕೊಡುಗೆ, ಶ್ರಮ ಹಾಕಿದ್ದ ಇವರನ್ನು ಭಾರತೀಯ ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ ಮಾತನಾಡಿ, ಡಾ.ಅಂಬೇಡ್ಕರ್ ಅವರು ಭಾರತರತ್ನ, ವಿಶ್ವ ರತ್ನರಾಗಿದ್ದಾರೆ. ಅವರು ಪಡೆದುಕೊಂಡಿರುವ ಪದವಿಗಳನ್ನು ಗಮನಿಸಿದರೆ ಒಪ್ಪತ್ತು ಉಪವಾಸ ಇದ್ದರು ಸಹ ಓದುವುದನ್ನು ಮಾತ್ರ ನಿಲ್ಲಿಸಿರಲಿಲ್ಲ ಇದು ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದರು.
ವಿಷಯ ಪರಿವೀಕ್ಷಕ ಸಮೀವುಲ್ಲಾ ಮಾತನಾಡಿ,ಅಂಬೇಡ್ಕರ್ ಓರ್ವ ವ್ಯಕ್ತಿಂiÀiಲ್ಲ ಅವರೊಂದು ಶಕ್ತಿಯಾಗಿದ್ದರು ಎಂದ ಅವರು, ಅವರಲ್ಲಿನ ಓದುವ ಹವ್ಯಾಸ, ಶೋಷಿತರಪರವಾದ ಕಾಳಜಿ, ಅಸಮಾನತೆ ಹೋಗಲಾಡಿಸುವಲ್ಲಿನ ಬದ್ದತೆ ನಮಗೆಲ್ಲಾ ಮಾದರಿಯಾಗಿದೆ ಎಂದರು.
ವಯೋನಿವೃತ್ತರಿಗೆ ಆತ್ಮೀಯ ಬೀಳ್ಕೊಡುಗೆ
ಇದೇ ಸಂದರ್ಭದಲ್ಲಿ ಈ ವರ್ಷ ನಿವೃತ್ತರಾಗುತ್ತಿರುವ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಿದ್ದು, ಶ್ರೀಧರ್ ಬಾಬುಮಾರುತಿ ಪ್ರೌಢ ಶಾಲೆ ಮುಳಬಾಗಿಲು, ಶ್ರೀ ನರಸಿಂಹ ಪ್ರಸಾದ್ ಚಿನ್ಮಯ ವಿದ್ಯಾ ಸಂಸ್ಥೆ ಕೋಲಾರ. ವೀಣಾ ಮೇಡಂ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿಯ ಚಂದ್ರಶೇಖರ್, ಕೋಲಾರ ಜಿಲ್ಲಾ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರ ಸಂಘದ ಶ್ರೀನಿವಾಸ ಗೌಡ, ಉಪಪ್ರಾಂಶುಪಾಲೆ ಶಶಿ ವಧನ, ವೆಂಕಟರವಣಪ್ಪ, ಅಮರೇಶ್ ಬಾಬು, ಮುನಿರಾಜು ವಿ.ಜಿ., ಎಂ.ಬಿ.ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.

