

ಕುಂದಾಪುರ; ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ 135 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ‘ದೇಶದಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾದ ಸಮಾಜಗಳಿಗೆ ಮೊದಲ ಆದ್ಯತೆ ನೀಡುವ ಸಂವಿಧಾನ ಅಂಬೇಡ್ಕರ್ ರಚಿಸಿ ಅಸಮಾನತೆಯಿಂದ ಸಮಾನತೆಯ ಬದಲಾವಣೆಗೆ ಕಾರಣರಾದರು’ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮಾತನಾಡಿದರು. ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ , ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್ , ಪುರಸಭಾ ಸದಸ್ಯರಾದ ಶ್ರೀಧರ ಶೇರಿಗಾರ್ , ಪ್ರಭಾವತಿ ಶೆಟ್ಟಿ , ಅಶೋಕ್ ಸುವರ್ಣ , ಗ್ಯಾರಂಟಿ ಸಮಿತಿಯ ಸದಸ್ಯರಾದ ವಾಣಿ ಶೆಟ್ಟಿ , ಆಶಾ ಕರ್ವಾಲ್ಲೊ , ಪಕ್ಷದ ಪ್ರಮುಖರಾದ ರೋಷನ್ ಶೆಟ್ಟಿ , ಜೋಸೆಫ್ ರೆಬೆಲ್ಲೊ , ಗೀತಾ ಆನಗಳ್ಳಿ , ರೇವತಿ ಶೆಟ್ಟಿ , ವೇಲಾ ಬ್ರಗಾಂಜ , ಅರುಣ್ ಪಟೇಲ್ , ಮೇಬಲ್ ಡಿಸೋಜಾ , ವಿವೇಕಾನಂದ ಚರ್ಚ್ ರಸ್ತೆ , ಸವಿತಾ ಸಿಕ್ವೇರಾ ,ಕ್ಲಿಫರ್ಟ್ ಡಿಸಿಲ್ವಾ , ಏಡಾಲ್ಫ್ ಡಿ ಕೋಸ್ಟಾ ಇನ್ನಿತರರು ಉಪಸ್ಥಿತರಿದ್ದರು.




