

ಕಾರ್ಕಳ, ಎ. 5: ಅತ್ತೂರು ಸೈಂಟ್. ಲಾರೆನ್ಸ್ ಬಾಸಿಲಿಕಾದಲ್ಲಿ ಈಸ್ಟರ್ ವಿಜಿಲ್ (ಪುನರುತ್ಥಾನದ. ಜಾಗರಣೆ) ಭಕ್ತಿಯಿಂದ ಆಚರಿಸಲಾಯಿತು. ಮರಣವನ್ನು ಗೆದ್ದ ಯೇಸುಕ್ತಿಸ್ತರ ಪುನರುತ್ಥಾನದ ಸಂಭ್ರಮ ಸಾರುವ ಆಚರಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು. ಚರ್ಚ್ನ ಮುಂಭಾಗದಲ್ಲಿ ಹೊಸ. ಅಗ್ನಿಗೆ ಆಶೀರ್ವಾದ ನೀಡಲಾಯಿತು.
ಈ ಅಗ್ನಿಯಿಂದ “ಪಾಸ್ಕ” ದೀಪವನ್ನು ಬೆಳಗಿಸಲಾಯಿತು. ಇದು ಕತ್ತಲೆಯನ್ನು, ಹೋಗಲಾಡಿಸಿ ಲೋಕಕೆ ಬೆಳಕಾಗಿ ಬಂದ ‘ಯೇಸುಕ್ರಿಸ್ತರ’ ಸಂಕೇತವಾಗಿದೆ. ವಿಶ್ವಾಸಿಗಳು ಈ ದೀಪದಿಂದ ತಮ್ಮ ಕೈಯಲ್ಲಿದ್ದ ಮೇಣದಬತ್ತಿಗಳನ್ನು ಬೆಳಗಿಸಿ, ಭಕ್ತಿಭಾವದಿಂದ ಚರ್ಚ್ನೊಳಗೆ ಮೆರವಣಿಗೆಯ ಮೂಲಕ ಪ್ರವೇಶಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ರೆಕ್ಟರ್ ವಂ। ಆಲ್ಬನ್ ಡಿ’ಸೋಜಾ ಅವರು ವಹಿಸಿ, ಬಲಿಪೂಜೆಯನ್ನು ನೆರವೇರಿಸಿ, ‘ಕ್ರಿಸ್ತನ ಪುನರುತ್ವಾನವು ಮಾನವ ಕುಲಕ್ಕೆ ಹೊಸ ಭರವಸೆ ಮತ್ತು ಜಯದ ಸಂಕೇತವಾಗಿದೆ’ ಎಂದು ಸಂದೇಶ ನೀಡಿದರು.
ಜಾಗರಣೆಯ ಈ ಪವಿತ್ರ ಸಂಜೆ ವಿಸ್ವಾಸಿಗಳು, ಹಳೆ ಒಡಂಬಡಿಕೆ, ಹೊಸ ಒಡಂಬಡಿಕೆಗಳಿಂದ ವಾಚನ, ಜಲ ಆಶೀರ್ವಾದ ಹಾಗೂ ತಮ್ಮ ದಿಕ್ಹಾವಾಗ್ದಾನಗಳ ನವೀಕರಣ, ಸಮುದಾಯ ಜಗತ್ತಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಅನಂತರ ನಡೆದ ಪವಿತ್ರ ಬಲಿದಾನ ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಮಕ್ತಾಯವಾಯಿತು, ರವಿವಾರವೂ ಬಲಿದಾನಗಳು ನಡೆದವು.





































