

ಬಸ್ರೂರು ಸ್ಯೆಂಟ್ ಫಿಲಿಪ್ ನೇರಿ ಚರ್ಚಿನಲ್ಲಿ ಗುರುವಾರ ಯೇಸು ಕ್ರಿಸ್ತನ ಕೊನೆಯ ಭೋಜನ ಮತ್ತು ಅವರು ಶಿಷ್ಯರ ಪಾದ ತೊಳೆದ ನೆನಪಿನ ಆರಾಧನೆ ನೆರವೇರಿತು ಉಡುಪಿ ಕೆಥೋಲಿಕ್ ಧರ್ಮ ಕೇಂದ್ರದ ಚಾನ್ಸಲರ್ ಫಾದರ್ ಸ್ಟೀಫನ್ ನ ಡಿಸೋಜ ದೇವರ ವಾಕ್ಯದ ಮೇಲೆ ಯೇಸುಕ್ರಿಸ್ತರು ಒಳ್ಳೆಯ ಯಾಜಕರಾಗಿದ್ದರು ನಾವು ಇಂದು ನಮ್ಮ ಯಾಜಕರನ್ನು ಫಾದರ್ ಎಂದು ಕರೆಯಲು ಏಸುಕ್ರಿಸ್ತರೇ ಕಾರಣ ನಾವು ಏಸುಕ್ರಿಸ್ತರಂತೆ ಅವರಲ್ಲಿ ಕೂಡ ಸೇವೆಯ ಗುಣಗಳನ್ನು ನಾವು ಕಾಣುತ್ತಿದ್ದೇವೆ ಆದ್ದರಿಂದ ಯಾಜಕರನ್ನು ನಾವು ಗೌರವಿಸಿ ಅವರ ಸೇವೆಯನ್ನು ಕೊಂಡಾಡುವ ದಿನವಾಗಿರುತ್ತದೆ ಎಂದರು ಬಳಿಕ ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ರವರು 12 ಜನರ ಪಾದಗಳನ್ನು ತೊಳೆದರು ಬಳಿಕ ಆರಾಧನೆ ನಡೆಯಿತು ಸಹಾಯಕ ಗುರುಗಳಾದ ಫಾದರ್ ಶರೂನ್ ಡಿಸೋಜ ಹಾಗೂ ಅಪಾರ ಸಂಖ್ಯೆಯಲ್ಲಿ ಧಾರ್ಮಿಕರು ಕಾರ್ಯಕ್ರಮದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಪಾಲ್ಗೊಂಡಿದ್ದರು.






