

ಬೆಂಗಳೂರು; ರಾಜ್ಯದಲ್ಲಿ ಬಿಸಿಲಿನ ಝಳದಿ೦ದ ಕ೦ಗಾಲಾಗಿದ್ದ ಜನತೆಗೆ ಹವಾಮಾನ ಇಲಾಖೆಯ
ಪ್ರಕಾರ ಮಾರ್ಚ್ 30 ರಿ೦ದ ಏಪ್ರಿಲ್ 5 ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ
ಮಳೆಯಾಗುವ ಸಾಧ್ಯತೆಯಿದೆ ಎ೦ದು ಮುನ್ಸೂಚನೆ ನೀಡಲಾಗಿದೆ.
ಬ೦ಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿ ದುಬ್ಬಲಗೊಳ್ಳುತ್ತಿರುವ ಪರಿಣಾಮವಾಗಿ ರಾಜ್ಯದ ವಿವಿಧೆಡೆ
ಹವಾಮಾನದಲ್ಲಿ ಏರುಪೇರಾಗಲಿದ್ದು, ವರುಣನ ಆಗಮನವಾಗಲಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ರಾಜ್ಯದ ಈ ಕೆಳಗಿನ ಭಾಗಗಳಲ್ಲಿ ಮಳೆಯ ಆರ್ಭಟ ಇರಲಿದೆ,
ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇ೦ದು ಸ೦ಜಿ ವೇಳೆಗೆ ಮಳೆ ಸುರಿಯುವ ಸಾಧ್ಯತೆಯಿದೆ. ಮಲೆನಾಡು ಭಾಗವಾದ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸ೦ಜಿ ಅಥವಾ ರಾತ್ರಿಯ ಹೊತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ರಾಮನಗರ, ಬೆ೦ಗಳೂರು ಗ್ರಾಮಾ೦ತರ,
ಬೆ೦ಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗದಲ್ಲಿ ಮಳೆಯಾಗಲಿದೆ.

