

ಕುಂದಾಪುರ.ಮಾ.22:ಕತ್ತಲೆಯಲ್ಲಿ ಯೇಸು ಕ್ರಿಸ್ತರ ಶಿಲುಭೆ ಅಥವ ಯೇಸು ಕ್ರಿಸ್ತರ ಶವ ರೂಪದ ಪ್ರತಿಮೆ ಇಟ್ಟು ಕತ್ತಲಲ್ಲಿ ದೀಪಗಳ ಬೆಳಕಿನಲ್ಲಿ ನೆಡೆಸುವಂವತಹ ತೈಜೆ ಆರಾಧನೆ ಕುಂದಾಪುರ ರೋಜರಿ ಚರ್ಚಿನಲ್ಲಿ ಐ.ಸಿ.ವೈ.ಎಮ್ ಸಂಘಟನೆ ನೇತ್ರತ್ವದಲ್ಲಿ ಮಾ. 21 ರಂದು ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಕತ್ತಲಲ್ಲಿ ದೀಪಗಳನ್ನು ಇಟ್ಟು ಮೌನಕ್ಕೆ ಆದ್ಯತೆ ಕೊಟ್ಟು ಭಜನೆ, ದೇವರ ವಾಕ್ಯಗಳೊಂದಿಗೆ ಮಾಡುವ ಈ ವಿಶಿಷ್ಟ ಆರಾಧನೆಯನ್ನು ಕಟ್ಕರೆ ಬಾಲ ಆಶ್ರಮದ ಯಾಜಕ ಸೇವಕರಾದ ನೆಲ್ಸನ್ ಮೊಂತೇರೊ ನಡೆಸಿಕೊಟ್ಟರು. ಈ ಭಜನಾ ಕೂಟದಲ್ಲಿ ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಮತ್ತು ಧರ್ಮಭಗಿನಿಯರು ಹಾಜರಿದ್ದು, ಐ.ಸಿ.ವೈ.ಎಮ್ ಸಂಘಟನೆಯ ಸದಸ್ಯರು ಆರಾಧನೆ ನಡೆಸುವಲ್ಲಿ ಭಾಗಿಯಾದರು. ಚರ್ಚಿನ ಭಕ್ತಾಧಿಗಳು ಈ ಭಜನಾ ಕೂಟದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.





















