

ಶ್ರೀನಿವಾಸಪುರ : ಬುಧವಾರ ವಿದ್ಯಾರ್ಥಿಗಳ ಜೀವನದ ಗುರಿಯನ್ನ ಮುಟ್ಟಲು ಮೊದಲ ಹಂತದ ಪರೀಕ್ಷೆಯಾದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಿದ್ದು, ಮೊದಲ ದಿನ ಪ್ರಥಮ ಭಾಷೆಯಾದ ಕನ್ನಡ ಪರೀಕ್ಷೆಯ ಸುಗಮವಾಗಿ ನಡೆಯಿತು.
ತಾಲೂಕಿಗೆ ಸಂಬಂಧಿಸಿದಂತೆ ಒಟ್ಟು ೧೦ ಕೇಂದ್ರಗಳಲ್ಲಿ ೨೫೫೩ ಪರೀಕ್ಷೆಗೆ ಹಾಜರಾಗಿ ೨೧ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಮುನಿಲಕ್ಷ್ಮಯ್ಯ ಹಾಗು ನೋಡಲ್ ಅಧಿಕಾರಿ ಲಕ್ಮೀ ನಾರಾಯಣ ತಿಳಿಸಿದರು.

