

ಕುಂದಾಪುರ, ಮಾ. 19: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ನಲ್ಲಿ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬವನ್ನು ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ|ವಂ| ಪೌಲ್ ರೇಗೊ ಇವರ ನೇತ್ರತ್ವದಲ್ಲಿ ಹಾಗೂ ಬ್ರಹ್ಮಾವರ ಹೋಲಿ ಫೆಮಿಲಿ ಚರ್ಚಿನ ಧರ್ಮಗುರು ವಂ। ಜೋಕಿಮ್ ಡಿಸೋಜಾ ಇವರುಗಳು ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಹಬ್ಬವನ್ನು ಆಚರಿಸಿದರು.
“ಸಂತ ಜೋಸೆಪರು ದೇವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿದ ವಿಧೇಯ ಮಹಾಪುರುಷನಾಗಿದ್ದಾನೆ, ಅತಂಕದ ವೇಳೆ ದೇವರ ಮಾತೆ ಮರಿಯಾಳಿಗೆ ಮತ್ತು ಪುತ್ರನಿಗೆ ರಕ್ಷಣೆ ಕೊಟ್ಟವನು, ಹೀಗಾಗಿ ನಮ್ಮ ರಕ್ಷಕನಾದ ಏಸುವಿಗೆ ಆತ ರಕ್ಷಕನಾಗಿ ದೇವರು ಆತನಿಗೆ ಕೊಟ್ಟ ಕರ್ತವ್ಯವನ್ನು ನಿಭಾಯಿಸಿದ ದೇವರ ಸೇವಕನು. ಆತ ಏಸುವನ್ನು ಉತ್ತಮ ಗುಣಗಳಿಂದ ಪೋಷಿಸಿದ, ಅವನು ಜೀವನವಿಡಿ ಮೌನವಾಗಿ ದೇವರ ಇಚ್ಚೆಯನ್ನು ಪೂರೈಸಿದ, ಪ್ರಮಾಣಿಕ ವ್ಯಕ್ತಿ, ಹೆಚ್ಚು ಪ್ರಚಾರವನ್ನು ಪಡೆಯದೆ, ಸಾಮಾನ್ಯ ಜೀವನ ಸಾಗಿಸಿ, ದೇವರ ಮುಂದೆ ಶ್ರೇಷ್ಟನಾದವನು, ಇಂದು ನಾವು ಕೂಡ ಸಂತ ಜೋಸೆರಂತೆ ಜೀವಿಸಬೇಕಾಗಿದೆ’ ಎಂದು ಫಾ। ಜೋಕಿಮ್ ಡಿಸೋಜಾ ಸಂದೇಶ ನೀಡಿದರು.
ಫಾ।ಪೌಲ್ ರೇಗೊ “ಸಂತ ಜೋಸೆಪರು ನಮಗೆಲ್ಲ ಆದರ್ಶರು ಅವರ ಜೀವನ ನಮಗೆ ಪ್ರೇರಣೆ ಆಗಲಿ” ಎಂದು ಕರೆಕೊಟ್ಟು ಎಲ್ಲರಿಗೂ ಹಬ್ಬದ ಶುಬಾಶಯಗಳನ್ನು ಕೋರಿದರು.
ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಅತಿಥಿ ಧರ್ಮಭಗಿನಿಯರು, ಕಾರ್ಮೆಲ್ ಭಗಿನಿಯರ ಸಹಾಯಕ್ಕೆ ಇರುವ, ಎ.ಸಿ.ಎ. ಪಂಗಡದವರು, ಕಿರು ಸಹಾಯಕರ ಬ್ಲೊಸಮ್ ಪಂಗಡದವರು ಮತ್ತು ಭಕ್ತಾಧಿಗಳು ಬಹಳ ಸಂಖೆಯಲ್ಲಿ ಹಬ್ಬದ ಬಲಿದಾನದಲ್ಲಿ ಭಾಗಿಯಾಗಿದ್ದರು. ಕಾನ್ವೆಂಟ್ ಮುಖ್ಯಸ್ಥೆ ವಂ। ಧರ್ಮಭಗಿನಿ ಸುಪ್ರಿಯ ವಂದಿಸಿದರು. ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

















































