

ಕುಂದಾಪುರ ಮಾ.10: ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಬಹಳ ಹೆಸರುವಾಸಿಯಾದ, ಅತ್ಯಂತ ಹೆಚ್ಚು ಹಿಂಬಾಲಿಕರಿರುವ ಫಾ|ಫ್ರಾಂಕ್ಲಿನ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಅಧ್ಯಾತ್ಮಿಕ ಮಾ.9, 10 ಮತ್ತು 11 ರ ವರೆಗೆ ನಡೆಯಲಿರುವ ಧ್ಯಾನಕೂಟ ಮಾ. 9 ರಂದು ಆರಂಭವಾಯಿತು. ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಧ್ಯಾನ ಕೂಟಕ್ಕೆ ಸ್ವಾಗತಿಸಿದರು
ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಮೊದಲ ದಿನ ದೇವರ ವಾಕ್ಯಗಳ ಮೇಲೆ ಫಾ।ಫ್ರಾಂಕ್ಲಿನ್ ಪ್ರವಚನಗಳ ಮೂಲಕ ಧರ್ಮೋಪದೇಶ ಮಾಡಿದರು. ಪರಮ ಪ್ರಸಾದದ ಆರಾದನೆಯನ್ನು ನಡೆಸಿಕೊಟ್ಟು ಅಸೌಕ್ಯರ ಮೇಲೆ ವೀಷೆಶ ಪ್ರಾಥನೆ ಕೋರಿದರು. ಎಲ್ಲರ ತಲೆಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ನಡೆಸಿ ಪವಿತ್ರ ಜಲದಿಂದ ಪ್ರೋಕ್ಷಣೆ ಮಾಡಾಲಾಯಿತು. ಹಲವರು ರೋಗಗಳಿಂದ ಗುಣಮುಖವಾಗಿದ್ದಾರೆಂದು ತಿಳಿಸಲಾಯಿತು.
ಪವಿತ್ರ ಬಲಿದಾನ ಅರ್ಪಿಸುವ ಮೂಲಕ ಮೊದಲ ದಿನದ ಧ್ಯಾನಕೂಟ ಸಂಪನ್ನವಾಯಿತು. ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಬಲಿದಾನದಲ್ಲಿ ಭಾಗಿಯಾಗಿ ಧ್ಯಾನ ಕೂಟಕ್ಕೆ ಸಹಕರಿಸಿದರು. ಸಹೋದರ ವಿಲಿಯಮ್ ಡಿ’ಸೋಜಾ ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ ಧ್ಯಾನ ಕೂಟದ ಯಶಸ್ವಿಗೆ ಸಹಕರಿಸಿದರು.

































