

ಕುಂದಾಪುರ: ಮಾರ್ಚ್ 3ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ 1976ರ ಬ್ಯಾಚ್ ವಿದ್ಯಾರ್ಥಿಗಳ ಪುನರ್ಮಮಿಲನ “ಬಂಗಾರದ ಭೇಟಿ ” ಕಾರ್ಯಕ್ರಮ ನಡೆಯಿತು.
1976ನೇ ಸಾಲಿನಲ್ಲಿ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದು ಮುಗಿಸಿದ ಈ ವಿದ್ಯಾರ್ಥಿಗಳು 50ನೇ ವರ್ಷದ ನೆನಪಿಗಾಗಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರುಗಳಾದ ಪ್ರೊ.ಮೋಹನದಾಸ್ ಪೈ, ಪ್ರೊ.ಎ.ಪಿ.ಮಿತ್ತಂತ್ತಾಯ, ಪ್ರೊ. ಬಾಲಕೃಷ್ಣ ಭಟ್, ಮೋಹನದಾಸ ಪೈ , ಪ್ರೊ.ರಘುರಾಮ್ ರಾವ್, ಮತ್ತು ಪ್ರೊ.ಕೆ.ಸಿ.ಶರ್ಮಾ ಅವರು ಉದ್ಘಾಟಿಸಿದರು.
ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎ.ಪಿ.ಮಿತ್ತಂತ್ತಾಯ, ಪ್ರೊ.ಬಾಲಕೃಷ್ಣ ಭಟ್ ಅಂದಿನ ವಿದ್ಯಾರ್ಥಿಗಳು ಮತ್ತು ಗುರುಗಳ ಬಾಂಧವ್ಯವನ್ನು ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತಾರಾಮ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ದಿವಂಗತ ಪ್ರೊ.ಕೃಷ್ಣರಾವ್, ಹಾಗೂ ಪ್ರಾಧ್ಯಾಪಕರುಗಳು ಮತ್ತು 1976ರ ಬ್ಯಾಚ್ ನ ಸುಮಾರು 22ವಿದ್ಯಾರ್ಥಿಗಳಗೆ ಮೌನಾಚರಣೆ ಮೂಲಕ ಸ್ಮರಿಸಲಾಯಿತು. 1976ರ ಬ್ಯಾಚ್ ವಿದ್ಯಾರ್ಥಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಛೇರ್ಮನ್ ಕೆ.ಆರ್. ಕಾಮತ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.ಕರ್ನಾಟಕ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಗಿರಿಧರ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ 53 ವಿದ್ಯಾರ್ಥಿಗಳು ಸಮ್ಮಿಲನದಲ್ಲಿ ಮನೋರಂಜನೆ ಹಳೆಯ ನೆನಪುಗಳನ್ನು ಮೆಲುಕುವಿಕೆ ಪರಸ್ಪರರ ಪರಿಚಯ ನಡೆಯಿತು.




