

ಮಾರ್ಚ್ 1 ರಂದು ನಿರ್ಕಾಣ ಸಂತ ತೋಮಸ್ ಚರ್ಚಿನಲ್ಲಿ ಧರ್ಮೋಪದೇಶದ ದಿನಾಚರಣೆ ಪ್ರಯುಕ್ತ ಚರ್ಚಿನ ಪ್ರಧಾನ ಗುರುಗಳಾದ ಫಾದರ್ ಅನಿಲ್ ರೋಶನ್ ಲೋಬೊ ಬಲಿಪೂಜೆಯನ್ನು ನಡೆಸಿ ಯೇಸು ಕ್ರಿಸ್ತರ ರೂಪಾಂತರದ ಅಗತ್ಯ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಕ್ರೈಸ್ತ ಶಿಕ್ಷಣದಿಂದ ನಮ್ಮ ಜೀವನಲ್ಲಿ ನಾವು ಯಾವ ರೀತಿ ರೂಪಾಂತರ ಗೊಳ್ಳಲು ಸಾಧ್ಯ ಎಂಬುದನ್ನು ತಿಳಿಸಿದರು. ಬಳಿಕ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ವಿವಿದ ತರಗತಿಯ ವಿದ್ಯಾರ್ಥಿಗಳು ಯೇಸುವಿನ ಜೀವನದ ಮೌಲ್ಯಗಳ ಬಗ್ಗೆ ವಿವಿದ ವಿನೋದವಳಿಗಳನ್ನು ಪ್ರಸ್ತುತ ಪಡಿಸಿದರು.
ಪ್ರತಿ ಭಾನುವಾರ ಧಾರ್ಮಿಕ ಶಿಕ್ಷಣಕ್ಕೆ ಹಾಜರಾದ ಮಕ್ಕಳಿಗೆ, ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ವಂದನೀಯ ಫಾ। ಅನಿಲ್ ರೋಶನ್ ಲೋಬೊ ಬಹುಮಾನವನ್ನು ಹಾಗೂ ಬೋಧಿಸುತ್ತಿರುವ ಶಿಕ್ಷಕಿಯರಿಗೆ ನೆನಪಿನ ಕಾಣಿಕೆಯನ್ನು ನೀಡಿ ಪ್ರಶಂಸಿದರು. ಕ್ರೆöÊಸ್ತ ಶಿಕ್ಷಣದ ಸಂಯೋಜಕಿ ಸಿಸ್ಟರ್ ಸೆವೆರಿನ್ ಫೆರ್ನಾಂಡಿಸ್ ವಾರ್ಷಿಕ ವರದಿಯನ್ನು ವಾಚಿಸಿದರು. ಪಾಲನಮಂಡಳಿಯ ಕಾರ್ಯದರ್ಶಿ ಶ್ರೀಮತಿ ಶಾಂತಿ ಲೋಬೊ, ಚರ್ಚಿನ ಆಯೋಗದ ಸಂಯೋಜಕರಾದ ಶ್ರೀ ಸ್ಟ್ಯಾನಿ ಲೋಬೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರೈಸ್ತ ಶಿಕ್ಷಣದ ಶಿಕ್ಷಕಿ ಶ್ರೀಮತಿ ಮೆಲಿನಾ ಕ್ರಾಸ್ತಾ ಸ್ವಾಗತಿಸಿದರು. ಕ್ರೈಸ್ತ ಶಿಕ್ಷಣದ ಆಯೋಗದ ಕಾರ್ಯದರ್ಶಿ ಶ್ರೀಮತಿ ಟೀನಾ ಪಿಂಟೊ ವಂದಿಸಿದರು. ಕು!ನೆಸ್ಲಿನ್ ಪ್ರಿಯಾ ಡಿಸೋಜ ಕಾರ್ಯಾಕ್ರಮವನ್ನು ನಿರೂಪಣೆ ಮಾಡಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.









