

ಹಂಗಾರಕಟ್ಟೆ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಅಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅಲಯನ್ಸ್ ಕ್ಲಬ್ ಕೋಟ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಮಕ್ಕಳ ವಿಜ್ಞಾನ ಮಾದರಿ ಪ್ರದರ್ಶನದ ಉದ್ಘಾಟನೆಯನ್ನು ಶ್ರೀ ಸುಧಾಕರ ಹೆಗ್ಡೆ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಅಲಯನ್ಸ್ ಕ್ಲಬ್ ಅವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಲಯನ್ಸ್ ಕ್ಲಬ್ ಕೋಟ ಬ್ರಹ್ಮವಾರ ಇದರ ಅಧ್ಯಕ್ಷರಾದ ಐರೋಡಿ ಕರುಣಾಕರ್ ಶೆಟ್ಟಿ ಇವರು ನೆರವೇರಿಸಿದರು. ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ವಿಜ್ಞಾನ ಚಿತ್ರಗಳ ರಂಗೋಲಿ ಬಿಡಿಸುವ ಸ್ಪರ್ಧೆ ಹಾಗೂ ವಿಜ್ಞಾನ ರಸಪ್ರಶ್ನೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀಜಗದೀಶ ಹೊಳ್ಳ,ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಅಲಯನ್ಸ್ ಕ್ಲಬ್ , ಶ್ರೀ ರಾಮ ದೇವ ಹಂದೆ ,ನಿವೃತ್ತ ಶಿಕ್ಷಕರು ಶ್ರೀಮತಿ ಸೇಸು ನಿವೃತ್ತ ಶಿಕ್ಷಕರು,ಶ್ರೀಮತಿ ಮಾಲಿನಿ ಎಂ ಪಿ ಹಂಗಾರಕಟ್ಟೆ ಕ್ಲಸ್ಟರ್ ಸಿಆರ್ಪಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಉದಯಕುಮಾರ್ ಹಾಗೂ ಕೋಟಾ ಪೊಲೀಸ್ ಠಾಣೆಯ ಪೊಲೀಸರಾದ ದೀಕ್ಷಿತ ಮೇಡಂ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ರೇಖಾ ಉಡುಪ ರವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಉಷಾರಾಣಿ , ಪ್ರಸ್ತಾವಿಕ ಮಾತುಗಳನ್ನು ಶ್ರೀಮತಿ ವಿದ್ಯಾಶ್ರೀ,ಸ್ವಾಗತವನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೆಸ್ಸಿಲ್ಲ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಶ್ರೀಮತಿ ವೀಣಾ ಶೆಟ್ಟಿ ಮತ್ತು ಧನ್ಯವಾದ ಕಾರ್ಯಕ್ರಮವನ್ನು ಶ್ರೀಮತಿ ಯಶೋಧ ಇವರು ನೆರವೇರಿಸಿದರು. ಕಾರ್ಯಕ್ರಮದ ಯಶಸ್ವಿಗೆ ಶ್ರೀಮತಿ ರಮ್ಯಾ ಮತ್ತು ಶ್ರೀಮತಿ ಲವಿನ ಅವರು ಸಹಕರಿಸಿದರು.




















































































