

ದಿನಾಂಕ 22.2.2026 ರ಼ಂದು ಪಡುಕೋಣೆ ಚರ್ಚ್ಚನಲ್ಲಿ ಕ್ರೆಸ್ತ ಧಾರ್ಮಿಕ ಶಿಕ್ಷಣ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
. ಚರ್ಚನ ಧರ್ಮ ಗುರುಗಳಾದ ವಂದನೀಯ ಫಾ!ಪ್ರಾನ್ಸಿಸ್ ಕರ್ನೆಲಿಯೊ ಮತ್ತು ಡೊನ್ ಬೊಸ್ಕೊ ಸಂಸ್ಥೆಯ ಆಡಳಿತಾಧಿಕಾರಿಯವರಾದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್, ದೇವ ಪೀಠದಮಕ್ಕಳು, ಕ್ರೖಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು ಹಾಗೂ ಸುಮಾರು 400 ಮಂದಿ ಭಕ್ತರ ಜೊತೆ ಗೂಡಿ ಪವಿತ್ರ್ ಬಲಿ ಪೂಜೆಯನ್ನು ಅರ್ಪಿಸಿದರು,ಫಾ!ಅರ್ನೊಲ್ಡ್ ರವರು ಬಲಿಪೂಜೆಯ ತಮ್ಮ ಸಂದೇಶ ದಲ್ಲಿ ನಾವು ಒಳ್ಳೆ ಯದನ್ನು ಮಾಡುವಾಗ, ಹಾಗೆಯೇ ಪ್ರಾರ್ಥನೆ ಮಾಡುವಾಗ ನಮಗೆ ನೂರಾರು ಅಡಚಣೆಗಳು, ಪಿಶಾಚಿಯ ಉಪದ್ರಗಳು ಬರುತ್ತವೆ. ಅದನ್ನೆಲ್ಲಾ ಜಯಿಸುವ ಶಕ್ತಿಯನ್ನು ನಾವು ದೇವರ ಮುಖಾಂತರ ಪ್ರಾರ್ಥಸಿ, ಪಡೆದುಕೊಳ್ಳಬೇಕು.ಅದುವೇ ನಮ್ಮ ಈ ಜೀವನದ ಜಯಿಸುವ ಗುರಿ ಎಂದು ಉತ್ತಮ ಸಂದೇಶ ವಿತ್ತರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರತಿ ಕ್ರೖಸ್ತ ಶಿಕ್ಷಣದ ತರಗತಿಯ ಮಕ್ಕಳು ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿದರು. ಪ್ರತಿ ಭಾನುವಾರ ಧಾರ್ಮಿಕ ಶಿಕ್ಷಣಕ್ಕೆ ಹಾಜರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ಸ್ಥಾನ ಪಡೆದ ಮಕ್ಕಳಿಗೆ, ಬೋಧಿಸುತ್ತಿರವ ಶಿಕ್ಷಕರಿಗೆ ಹಾಗೂ ಇತರ ರೀತಿಯಲ್ಲಿ ಸಹಕರಿಸಿದ ಮುಖ್ಯಸ್ಥರಿಗೆ ಧರ್ಮ ಗುರುಗಳಾದ ವಂದನೀಯ ಫಾ!ಪ್ರಾನ್ಸಿಸ್ ಕರ್ನೆಲಿಯೊರವರು ಬಹುಮಾನ ನೀಡಿ ಸರ್ವರಿಗೂ ಪ್ರಶಂಸಿದರು. ಮುಖ್ಯ ಅತಿಥಿಗಳಾದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್ ಮಕ್ಕಳಿಗೆ ತಮ್ಮ ಸಂದೇಶದಲ್ಲಿ ಧಾರ್ಮಿಕ ಶಿಕ್ಷಣದ ಮಹತ್ವದ ಬಗ್ಗೆ, ಗುಣನಡತೆ, ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಪಾಲಿಸಲು ಸಲಹೆ ನೀಡಿ ಸರ್ವರನ್ನು ಅಭಿನಂದಿಸಿದರು. ಪಾಲನಾಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮಾನ್ ಜೋಸೆಫ್ ಡಿ’ಸಿಲ್ವರವರು ತಮ್ಮ ಮಕ್ಕಳ ಚಟುವಟಿಕೆ ಗಳನ್ನು ಪ್ರಶಂಸಿಸುತ್ತಾ ಧಾರ್ಮಿಕ ಶಿಕ್ಷಣ ಮಕ್ಕಳಿಗೆ ಮಾತ್ರ್ ವಲ್ಲಾ ಹಿರಿಯರು ಮಕ್ಕಳಾ ಜೊತೆಯಲ್ಲಿ ತಾವು ಈ ಶಿಕ್ಷಣದ ಬಗ್ಗೆ ಮುತುವರ್ಜಿ ವಹಿಸಿದರೇ ಉತ್ತಮ ಎಂದು ಕಿವಿ ಮಾತು ಹೇಳುತ್ತಾ ಸರ್ವರಿಗೂ ಶುಭಾಶಯ ಕೋರಿದರು. ಸಿ!ಲೂಸಿ, ಕಾರ್ಯದರ್ಶಿ ಶ್ರೀಮತಿ ಸಿಂತಿಯಾ ವಾಸ್, ಚರ್ಚಿನ ಅಯೋಗದ ಅಧ್ಯಕ್ಷೆ ಶ್ರೀಮತಿ ಟ್ರಿಜಾ ಸಿಕ್ವೇರಾ, ಕ್ರೖಸ್ತ ಶಿಕ್ಷಣದ ಸಂಯೋಜಕಿ ಶ್ರೀಮತಿ ಶಾಂತಿ ಡಿ’ಸಿಲ್ವಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರೖಸ್ತಾ ಶಿಕ್ಷಣದ ಕಾರ್ಯದರ್ಶಿ ಶ್ರೀಮತಿ ಜೆನೆಟ್ ಪಿರೇರಾವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕುಮಾರಿ ಜೆಸ್ಸಿಕಾ ಮತ್ತು ಶೖನಿಶ್ ಡಿ’ ಆಲ್ಮೇಡಾ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಕುಮಾರಿ ವೆಲೋರಾ ರೆಬೆಲ್ಲೊ ಸರ್ವರನ್ನು ಸ್ವಾಗತಿಸಿದರು. ಕು!ವೆನೋರಾ ಲುವಿಸ್ ಧನ್ಯವಾದ ಗೖದರು. ಈಗೇ ಲಘು ಉಪಹಾರ ದೊಂದಿಗೆ ಕಾರ್ಯಕ್ರಮ ಬಹಳ ವಿಜೃಂಭಣೆ ಯಿಂದ ಮುಕ್ತಾಯವಾಯಿತು .

























