
ಶ್ರೀನಿವಾಸಪುರ : ಸಾರ್ವಜನಿಕರ ಕೆಲಸ ದೇವರ ಕೆಲಸ ಎಂದ ಭಾವಿಸಿ ಪ್ರಾಮಾಣಿಕವಾಗಿ ಮಾಡಿದಾಗ ಹಳ್ಳಿಗಳ ಅಭಿವೃದ್ಧಿಯಲ್ಲಿ ಕುಂಠಿತವಾಗುವುದಿಲ್ಲ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು , ಅವರ ಅಭಿವೃದ್ದಿಯೇ ನನ್ನ ಗುರಿ . ಅವರಿಗೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡಿ, ಮತದಾರನ ಋಣವನ್ನು ತೀರಿಸುತ್ತಾ , ಮತದಾರನು ನೀಡಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುಲಾಗುವುದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ರಸ್ತೆಗಳು ಸೇರಿದಂತೆ ಸಾರ್ವಜನಿಕರ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದರು. ಬಹುತೇಕ ಗ್ರಾಮಗಳಲ್ಲಿ ಚರಂಡಿ,ಸಿಸಿ ರಸ್ತೆಗಳ ಕಾಮಗಾರಿಗಳು ಮುಗಿದಿದ್ದು, ಉಳಿದಿರುವ ಕಾಮಗಾರಿಗಳು ಇದ್ದಲ್ಲಿ ಪಟ್ಟಿ ಮಾಡಿಕೊಡುವಂತೆ ಸ್ಥಳೀಯರಿಗೆ ತಿಳಿಸಿದ್ದೇನೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕು. ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಚತೆ, ಶಾಲೆಗಳಿಗೆ ಸಂಬAದಿಸಿದ ಮೂಲ ಭೂತಸೌಲಭ್ಯಗಳನ್ನು, ಗ್ರಾಮಗಳಿಗೆ ಹಾದು ಹೋಗುವ ರಸ್ತೆ ಬದಿಯಲ್ಲಿ ಸ್ವಚ್ಚತೆ ಕಾರ್ಯ, ಆಡಳಿತಾಧಿಕಾರಿ ಹಾಗು ಪಿಡಿಒ ಅಧಿಕಾರಿಗಳು ನ್ಯಾಯಾಯುತವಾಗಿ ಶ್ರಮಮಾಡಬೇಕು ಎಂದರು. ಈ ಸಭೆಯಲ್ಲಿ
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಗ್ರಾಮಪಂಚಾಯಿತಿ ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲಿ ವಾರ್ಡ್ಸಭೆ, ಗ್ರಾಮಸಭೆ ಮಾಡಿ ಅಲ್ಲಿನ ಗ್ರಾಮಗಳಲ್ಲಿ ಯಾರು ನಿರಾಶ್ರಿತರು ಇದ್ದಾರೊ ಅವರನ್ನ ಗುರ್ತಿಸಿ, ಪ್ರಮಾಣಪತ್ರ ನೀಡಬೇಕು. ಇತ್ತೀಚಿಗೆ ಪಟ್ಟಿ ಬಂದಿತ್ತು, ಅದು ಸರಿಇರಲ್ಲಿಲ್ಲ, ಅದ್ದರಿಂದ ನಾನು ಆ ಜವಾಬ್ದಾರಿ ತೆಗೆದುಕೊಳ್ಳಲು ನಾನು ತಯಾರು ಇಲ್ಲ ಎಂದರು. ನ್ಯಾಯಾಯುತವಾಗಿ ಯಾರು ನಿರಾಶ್ರಿತರು ಇದ್ದಾರೂ ಅವರನ್ನ ಗುರ್ತಿಸಿ ಪಟ್ಟಿ ತಯಾರು ಮಾಡಿಕೊಡುವಂತೆ ಆಡಳಿತಾಧಿಕಾರಿಗಳಿಗೆ ಹಾಗು ಪಿಡಿಒ ರವರಿಗೆ ಸೂಚಿಸಿದರು.


