

ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತೀಯ ಜೂನಿಯರ್ ರೆಡ್ ಕ್ರಾಸ್ ವಿಂಗ್ ( JRCW) ಕಾರ್ಯಕ್ರಮ ಉದ್ಘಾಟನಾ ಸಮಾರಂಭ
ಶಾಲಾ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸೇವಾ ಮನೋಭಾವ ಮತ್ತು ಆರೋಗ್ಯ ಜಾಗೃತಿಯನ್ನು ಬೆಳೆಸುವ ದೃಷ್ಟಿಯಿಂದ ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀ ಎಸ್ .ಜಯಕರ ಶೆಟ್ಟಿಯವರು ರೆಡ್ ಕ್ರಾಸ್ ನ ಪರದೆಯನ್ನು ಅನಾವರಣಗೊಳಿಸುವ ಮೂಲಕ JRCW ಯನ್ನು ಉದ್ಘಾಟಿಸಿದರು. ಮತ್ತು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಜೂನಿಯರ್ ರೆಡ್ ಕ್ರಾಸ್ ನ ಸಂಯೋಜಕರಾದ ದಿನಕರ್ ಆರ್ ಶೆಟ್ಟಿಯವರು ಮಕ್ಕಳಿಗೆ ಪ್ರತಿಜ್ಞೆಯನ್ನು ಭೋದಿಸಿದರು.
ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಖಜಾಂಚಿಯಾದ ಶ್ರೀ ಶಿವರಾಮ ಶೆಟ್ಟಿ, ತುಳಸಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಕೃಷ್ಣರಾಯ ಶಾನುಬಾಗ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ರೇಷ್ಮಪ್ರದೀಪ್ ಉಪಸ್ಥಿತರಿದ್ದರು.ಎಂಟನೇ ತರಗತಿಯ ವಿದ್ಯಾರ್ಥಿನಿ ಪ್ರಣೀತ ಕೇಶವ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ರೂಪಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಜಯಶೀಲ ನಾಯಕ್ ಪ್ರಾಸ್ತಾವಿಸಿ, ವಿದ್ಯಾರ್ಥಿನಿ ಮಾನ್ವಿ ಆಚಾರ್ಯ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಂಟನೆಯ ತರಗತಿಯ ಬಾಲಕರಾದ ಸಾಕ್ಷರ್ ಶೆಟ್ಟಿ, ಶ್ರವಂತ್ , ಶ್ರೇಯಸ್, ಮಯೂಕ್, ಸುಶಾನ್ ಹಾಗೂ ತನ್ಮಯ್ ತಂಡದವರಿಂದ ರೆಡ್ ಕ್ರಾಸ್ ನ ಮಹತ್ವವನ್ನು ಸಾರುವ ಕಿರುನಾಟಕ ಪ್ರದರ್ಶನ ನಡೆಯಿತು.ಇದು ನೆರೆದಿರುವ ಗಣ್ಯರ ಗಮನ ಸೆಳೆಯಿತು.




