

ಪಡುಕೋಣೆ; ದಿನಾಂಕ : 8/2/2026 ರ಼ಂದು ಮಿಶಿನರಿ ಮಕ್ಕಳ ವಾರ್ಷಿಕ ದಿನಾ ಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ವಂ| ಫಾ| ಪ್ರಾನ್ಸಿಸ್ ಕರ್ನೆಲಿಯೊರವರು ಮಿಶಿನರಿ ಸಂಘದ ಮಕ್ಕಳು ಹಾಗೂ ಚರ್ಚಿನ ಭಕ್ತಾದಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.
ಬಲಿಪೂಜೆಯ ನಂತರ ಸಭಾಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ವಂ। ಫಾ।ಪ್ರಾನ್ಸಿಸ್ ಕರ್ನೆಲಿಯೊ ಮಕ್ಕಳೊಂದಿಗೆ ಈ ಸಂಘದ ಬಗ್ಗೆ ವಿವರಿಸುತ್ತಾ ಸಂಘವನ್ನು 1843ರಲ್ಲಿ ಪ್ರಾನ್ಸ್ ದೇಶದಲ್ಲಿ ಸ್ಥಾಪಿಸಿದರು.ಮಿಶಿನರಿ ಮೇಳ ಅಂದರೆ ಬಾಲಯೇಸುವಿನ ಮೇಳ ಅಂದರೆ ಮಕ್ಕಳಸಂಘ, ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿ ತ್ರಪ್ತಿ ಪಡೆಯುವ ಸಂಘ ಎಂದು ಕರೆಯುವರು. ಈ ಸಂಘವು 110 ರಾಷ್ಟ್ರಗಳಲ್ಲಿ ಇದೆ. ನಮ್ಮ ಭಾರತ ದೇಶದಲ್ಲಿಯೂ ಇದೆ. ಈ ಸಂಘದಿಂದ ಮಕ್ಕಳು ಅಧ್ಯಾತ್ಮಿಕ ಮತ್ತು ಲೌಕಿಕವಾಗಿ ಬೆಳೆಯುವ ರೀತಿ., ಮಾಡಬೇಕಾದ ತ್ಯಾಗ, ಪ್ರೀತಿ, ಬಾಂಧವ್ಯ, ಬಡಮಕ್ಕಳಿಗೆ ಸಹಾಯಹಸ್ತ, ದೊಡ್ಡವರಿಗೆ ಕೊಡುವ ಗೌರವ, ಮಾನ್ಯತೆ, ಪರಸ್ಪರ ಹಂಚಿಕೊಳ್ಳವ ರೀತಿ, ಒಳ್ಳೆಯ ಗುಣನಡತೆ, ಉತ್ತಮ ಶಿಕ್ಷಣ ಪಡೆಯುವ ರೀತಿ, ಜವಾಬ್ದಾರಿ ಹಂಚಿ ಕೊಳ್ಳುವ ಬಗ್ಗೆ, ಒಗ್ಗಟ್ಟು, ಶಿಸ್ತು, ಶೀಲ, ಶಿಕ್ಷಣ ಹಾಗೂ ಅಧ್ಯಾತ್ಮಿಕ ಚಿಂತನೆ, ಪ್ರಾರ್ಥನೆಯ ಮಹತ್ವ ಈ ಎಲ್ಲಾ ವಿಷಯಗಳ ಕುರಿತು ಅರಿವು ಮೂಡಿಸಿದರು.
ಮುಖ್ಯ ಅತಿಥಿ ಸಿಸ್ಟರ್ ಪ್ರೇಮ್ ರೋಜ್ ರವರು ಮಕ್ಕಳಿಗೆ ಸಂತ ತೆರೇಸಾರವರ ಜೀವನದ ಕುರಿತು ಉತ್ತಮ ಸಂದೇಶ ನೀಡಿ, ನೀವು ನಿಮ್ಮ ಜೀವನವನ್ನು ಆದಷ್ಟು ಅನಾಥರ, ರೋಗಿಗಳ ಸೇವೆ ಮಾಡುವುದರಿಂದ ನಮ್ಮ ಮನ್ಸಿಗೆ ನೆಮ್ಮದಿ ತೃಪ್ತಿ ಎಂದು ಕಿವಿ ಮಾತು ಹೇಳಿದರು. ಅನಂತರ ಮಕ್ಕಳಿಗೆ ಕೆಲವು ಪ್ರಶ್ನೆ ಗಳನ್ನು ಕೇಳಿ ಉತ್ತಮ ವಾಗಿ ಉತ್ತರಿಸಿದ ಮಕ್ಕಳಿಗೆ ಹಾಗೂ ಸಂಘಕ್ಕೆ ತಪ್ಪದೇ ಹಾಜರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಪ್ರಸ್ತೂತ ಜರ್ಮನಿಯಲ್ಲಿ ಸೇವೆ ನೀಡುವ ಸಿಸ್ಟರ್ ಲೂಸಿ, ಆಲ್ವಿನ್ ಡಿ’ಆಲ್ಮೇಡ್, ಶಾಂತಿ ಪಾಯಸ್ ಮುಖ್ಯಶಿಕ್ಷಕಿ ಸಂತ ಅಂತೋನಿ ಹಿ. ಪ್ರಾ. ಶಾಲೆ ಪಡುಕೋಣೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸದಸ್ಯೆ ಕುಮಾರಿ ಹೋಲೊರಾ ರೆಬೆಲ್ಲೊ, ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಸುಮಾರು 54 ಮಂದಿ ಸಂಘದ ಮಕ್ಕಳು ಹಾಗೂ ಸಂಘದ ಅಭಿಮಾನಿಗಳು ಹಾಜರಿದ್ದರು. ಮಿಶಿನರಿ ಸಂಘದ ಮಿಶಿನರಿ ಸಂಘದ ಸಚೇತಕಿ ಶಿಕ್ಷಕಿ ಡೇರಿ ರೆಬೆಲ್ಲೊ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನು ನೀಡಿದರು. ಪ್ರಾರ್ಥನೆ ಮತ್ತು ಲಘು ಉಪಹಾರ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
















