

ಉಡುಪಿ; ಮಾನವ ಬಂಧುತ್ವ ಹಾಗೂ ಮಹಿಳಾ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಉಡುಪಿ ಜಿಲ್ಲಾ ವತಿಯಿಂದ ಅನಾಥ ವಿದ್ಯಾರ್ಥಿಗಳ ಶಾಲೆಯಲ್ಲಿ ಸಂವಿಧಾನ ಹಾಗೂ ಮುಂದಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ನಡೆಸಿ ವಿದ್ಯಾರ್ಥಿಗಳಿಗೆ ಅಗತ್ಯ ಉಡುಗೊರೆ ಸಹಿತ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು.
ಮಾನವ ಬಂಧುತ್ವ ರಾಜ್ಯ ನಾಯಕರಾದ ರೋನಾಲ್ಡ್ ಮನೋಹರ್ ಮಾತನಾಡುತ್ತ ವಿದ್ಯಾರ್ಥಿಗಳು ಸಂವಿಧಾನವನ್ನು ಸರಿಯಾಗಿ ಅಭ್ಯಾಸಿಸಿ ತಮ್ಮ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಸಂಪಾದಿಸಬೇಕು. 55ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಇದ್ದ ಕಡು ಬಡತನ ರೇಖೆಯಿಂದ ಇಂದಿನ ಈ ಉತ್ತಮ ಪರಿಸ್ಥಿತಿಗೆ, ಈ ಹಿಂದೆ ಇದ್ದ ಬಡವರ ಪರ ಸರಕಾರಗಳೇ ಕಾರಣ, ಮುಂದೆ ಬರುವ ಎಐ ಹಾಗೂ ರೋಬೇಟಿಕ್ ತಂತ್ರಜ್ಞಾನ ಕಾಲದಲ್ಲಿ ನಾವು ಕಾಲವನ್ನು ಎದುರಿಸಲು ಯಾವ ರೀತಿ ಸನ್ನದರಾಗಬೇಕೆಂದು ವಿವರಿಸಿದರು.
ಚಾರ್ಲ್ಸ್ ಸಂವಿಧಾನಬಗ್ಗೆ. ಶ್ರೀಧರ್ ಅವರು ವಿದ್ಯಾರ್ಥಿಗಳ ಸನ್ನಡತೆ ಬಗ್ಗೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಂತಿ ಬಂಧುತ್ವ ತರಬೇತಿ ಶಿಬಿರಗಳ ಬಗ್ಗೆ ಮಾತನಾಡಿದರು. ಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷ ವಿಜಯ್ ಅವರ್ಸೆ, ತಾಲೂಕು ಸಂಚಾಲಕರಾದ ಚಾರ್ಲ್ಸ್. ಸಂಚಾಲಕ ಶ್ರೀಧರ್, ಸದಸ್ಯರಾದ ವತ್ಸಲಾ, ನೀನಾ, ನಾನ್ಸಿ, ನಲ್ಲೂರು, ಜೋಯ್ಸಿ, ಸುದರ್ಶನ್, ಲಿಲ್ಲಿ, ಕ್ಲಾರಿ ಉಪಸ್ಥಿತರಿದ್ದರು. ಸುದರ್ಶನ್ ಅವರು ವಂದಿಸಿದರು.


















