

ಪಟ್ಟಣದ ವರದ ಬಾಲಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ತಾಲೂಕು ಮಟ್ಟದ ಹಿಂದುಸಮಾಜ್ಯೋತ್ಸವ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಪಟ್ಟಣದ ಕೆಲಭಾಗಗಳಲ್ಲಿ ಶೋಭಯಾತ್ರೆ ನಡೆಸಲು ಪೊಲೀಸರಿಂದ ಅನುಮತಿ ದೊರಕಿಲ್ಲ ಎಂದು ಕೆಲವರು ಹೇಳುತ್ತಿದ್ದರೂ ಸಹ ಪಟ್ಟಣದ ಎಲ್ಲಾ ಭಾಗಗಳಲ್ಲಿ ಶೋಭಾಯಾತ್ರೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.
ಇಂದು ನಮ್ಮ ಧರ್ಮವನ್ನು ರಕ್ಷಿಸಲು ತಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ನಮ್ಮ ಧರ್ಮದ ಬಗ್ಗೆ ಅರಿವು ಮೂಡಿಸುತ್ತಿರಬೇಕು.ಇಸ್ಲಾಂರಿಗೆ ೫೭ ದೇಶ ಇದೆ ಆದರೆ ನಮಗೆ ಇರುವದೊಂದೆ ಭಾರತ. ನಮ್ಮ ದೇಶಕ್ಕೆ ಏನೇ ತೊಂದರೆ ಆದರೆ ಅದನ್ನ ನಾವು ನೋಡಲು ಸಾಧ್ಯವಾಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ .೨೦೩೫ ವರ್ಷಕ್ಕೆ ಆಖಂಡ ಭಾರತ ಮಾಡಲು ಸಾಧ್ಯವಾಗಲು ಸಾಧ್ಯ ಎಂದರು.
ಇಲ್ಲಿ ಬೆಳದು ಓದಿರುವ ಯುವ ಪಿಳೀಗೆಯು ತಮ್ಮ ನೈಪುನ್ಯತೆಯನ್ನ ಬಿಂಬಿಸಿ, ಶ್ರೀನಿವಾಸಪುರವನ್ನು ಇಡೀ ವಿಶ್ವವೇ ಗುರ್ತಿಸುವ ಹಾಗೆ ಬಿಂಬಿಸಬೇಕು. ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಹಳ್ಳಿಗಳನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ . ಕಾರಣ ಗ್ರಾಮೀಣ ಭಾಗದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನ ಮನಗಂಡು ಬಹುತೇಕರು ನಗರ ಪ್ರದೇಶಗಳಿಗೆ ವಲಸೆ ಹೋಗಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀನಿವಾಸಪುರದ ಸುತ್ತಮುತ್ತ ಸಾವಿರಾರು ಸರ್ಕಾರದ ಭೂಮಿಯಿದ್ದು ಅದರಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದಾಗ ಯುವಕರಿಗೆ , ರೈತರಿಗೆ ಒಂದಿಷ್ಟು ಸಹಾಯವಾಗುತ್ತದೆ ಹಾಗು ಅಭಿವೃದ್ಧಿಯಾಗುತ್ತದೆ ಎಂದರು.
ಹಿಂದೂ ಸಮಾಜ್ಯೋತ್ಸವ ಪ್ರಮುಖ ಬಾಷಣಕಾರರಾದ ನಿಶಾ ಯೋಗೀಶ್ವರ್ ಮಾತನಾಡಿ ನಮ್ಮ ದೇಶವು ಪವಿತ್ರ ಭೂಮಿ. ಇಲ್ಲಿ ಅನೇಕ ಮಹನೀಯರು, ಋಷಿ ಮುನಿಗಳು ತಪ್ಪಸ್ಸುಗಳನ್ನ ಆಚರಿಸಿ, ಹೋಮಹವನಗಳನ್ನು ಆಚರಿಸುವುದರ ಮೂಲಕ ನಮ್ಮ ಭರತ ಭೂಮಿಯನ್ನ ಪವಿತ್ರಗೊಳಿಸಿದ್ದಾರೆ. ರಾಮಾಯಣ . ಮಹಾಭಾರತದಂತಹ ಅನೇಕ ಘಟನೆಗಳು ನಡೆದಿರುವ ಕುಹುರುಗಳ ಇದ್ದು, ಇಂತಹ ಪವಿತ್ರಭೂಮಿಯನ್ನ ಉಳಿಸಿ ಮುಂದಿನ ಪೀಳಿಗೆ ಎಲ್ಲಾ ಮಹತ್ತರವಾದ ವಿಷಯಗಳನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಹಿಂದು ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ಇಂದಿನ ಹಿಂದು ಸಮಾಜ್ಯೋತ್ಸವ ಘೋಷ ವಾಕ್ಯದಂತೆ ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎಂಬಂತೆ ಎಲ್ಲರೂ ಸಹ ನುಡಿದಂತೆ ನಡೆದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡ ಹಾಗೆ. ನಮ್ಮಲ್ಲಿ ಅನೇಕ ಜಾತಿಗಳು ಇದ್ದು, ಎಲ್ಲರೂ ಸಹ ಒಗ್ಗಟ್ಟಾಗಿ ಇರುಬೇಕು ಎಂದರು.
ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಡಾ ಕೆ.ಎನ್.ವೇಣುಗೋಪಾಲ್, ಉಪಾಧ್ಯಕ್ಷೆ ಮಾಯಾಬಾಲಚಂದ್ರ, ಪದಾಧಿಕಾರಿ ದಿವಕಾರ್, ಬಿಜಿಎಸ್ ಶಾಲೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಎಂ.ಎಸ್.ಕೊಟೇಶ್, ಮುಖಂಡರಾದ ಸಿಎಂಆರ್ ಶ್ರೀನಾಥ್, ಪೂಲ್ಶಿವಾರೆಡ್ಡಿ , ಕೆ.ಎಲ್.ಕಾರ್ತಿಕ್, ಶಿವಮೂರ್ತಿ, ಭರತ್,ರವೀಶ್ ಮೌಲ್ಯ, ರಾಯಲ್ಪಾಡು ಸಿಮೆಂಟ್ನಾರಾಯಣಸ್ವಾಮಿ, ರಘುನಾಥರೆಡ್ಡಿ, ರಾಮಕೃಷ್ಣಪ್ಪ, ಪ್ರಸನ್ನ, ,ಸುನೀಲ್, ಇದ್ದರು.


