

ಶ್ರೀನಿವಾಸಪುರ : ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಗರುವಾರ ಹಿಂದೂ ಸಮಾಜ್ಯೋತ್ಸವ ಸಮಿತಿವತಿಯಿಂದ ನಡೆದ ಪೂರ್ವ ಬಾವಿಸಭೆಯ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ೩೧ ಶನಿವಾರ ವೇದಿಕೆ ಕಾರ್ಯಕ್ರಮವನ್ನ ವರದಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ವರದ ಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಪ್ರಾರಂಭವಾಗುವ ಮುನ್ನಾ, ಶೋಭಾಯಾತ್ರೆಯನ್ನ ಎಂಜಿ ರಸ್ತೆಯ ಮೂಲಕ ಮುಳಬಾಗಿಲು ವೃತ್ತ, ಕೋಲಾರ ವೃತ್ತ, ಚಿಂತಾಮಣಿ ವೃತ್ತ, ಮೂಲಕ ವೇದಿಕೆಯ ಬಳಿ ಶೋಬಾಯಾತ್ರೆಯು ಪೂರ್ಣವಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಬಂದತಂತವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪ್ರಾರಂಭವಾಗಿ ೧೦೦ ವರ್ಷಗಳು ಆಗಿರುವ ಸಂದರ್ಭದಲ್ಲಿ ಇಡೀ ದೇಶಾದ್ಯಾಂತ ಹಿಂದೂ ಸಮಾಜ್ಯೋತ್ಸವವನ್ನು ಆಚರಣೆಗಳನ್ನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಈ ಒಂದು ಕಾರ್ಯಕ್ರಮವನ್ನು ಮಾಡಲಾಗಿದೆ. ತಾಲೂಕಿನ ಎಲ್ಲಾ ಹಿಂದೂ ಬಾಂದವರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಮಾಡಿಕೊಡಬೇಕಾಗಿ ವಿನಂತಿ ಮಾಡಿದರು. ತಾಲೂಕಿನ ಎಲ್ಲಾ ಕಲಾಭಿಮಾನಿಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮಲ್ಲಿ ಇರುವ ಪ್ರತಿಭೆಯನ್ನ ತೋರಿಸಬೇಕು ಎಂದು ಮನವಿ ಮಾಡಿದರು.
ಹಿಂದೂ ಸಮಾಜ್ಯೋತ್ಸವ ಸಮಿತಿ ಪದಾಧಿಕಾರಿ ಮಾಯಬಾಲಚಂದ್ರ ಮಾತನಾಡಿ ಎಲ್ಲರೂ ಸೇರಿ ಹಿಂದೂ ಸಮಾಜೋತ್ಸವನ್ನ ಯಶಸ್ವಿ ಮಾಡಲು ಎಲ್ಲರೂ ಕೈಜೋಡಿಸೋಣ ಎಂದರು. ಪದಾಧಿಕಾರಿಗಳಾದ ಕೆ.ದಿವಾಕರ್, ಭರತ್ ಇದ್ದರು.

