

ಬೆಂಗಳೂರು : ರಾಜ್ಯದ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ 25 ಶಾಸಕರ ಸೇವಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಅವರ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ.
2024ರ ಜನವರಿ 26ರಂದು ಎರಡು ವರ್ಷಗಳ ಅವಧಿಗೆ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಾಸಕರ ಸೇವಾವಧಿ 2026ರ ಜನವರಿ 26ರಂದು ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಕೃತ ಅಧಿಸೂಚನೆ ಹೊರಡಿಸಿ, ಎಲ್ಲಾ 25 ಅಧ್ಯಕ್ಷರ ಸೇವಾವಧಿಯನ್ನು ಮುಂದುವರಿಸಿದೆ.
ಅಧಿಸೂಚನೆಯ ಪ್ರಕಾರ, ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸಚಿವರಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಸೇವಾವಧಿ ವಿಸ್ತರಣೆ ನೀಡಲಾಗಿದೆ.
ಈ ಆದೇಶವು 2026ರ ಜನವರಿ 26ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂದಿದೆ.
ಮುಂದುವರಿಕೆ ಪಡೆದ ಪ್ರಮುಖ ಅಧ್ಯಕ್ಷರು:
• ಎನ್.ಎ. ಹ್ಯಾರಿಸ್ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
• ಎಸ್.ಆರ್. ಶ್ರೀನಿವಾಸ್ (ವಾಸು) ಅಧ್ಯಕ್ಷರು, ಕೆಎಸ್ಆರ್ಟಿಸಿ
• ಕೆ.ಎಂ. ಶಿವಲಿಂಗೇಗೌಡ ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ
• ಅಪ್ಪಾಜಿ ಸಿ.ಎಸ್. ನಾಡಗೌಡ ಅಧ್ಯಕ್ಷರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
• ಭರಮಗೌಡ (ರಾಜು) ಅಧ್ಯಕ್ಷರು, ವಾಯುವ್ಯ ಸಾರಿಗೆ ಸಂಸ್ಥೆ
• ಬಿ.ಕೆ. ಸಂಗಮೇಶ್ವರ ಅಧ್ಯಕ್ಷರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಲ್ಯಾಂಡ್ ಆರ್ಮಿ)
• ಅಬ್ಬಯ್ಯ ಪ್ರಸಾದ್ ಅಧ್ಯಕ್ಷರು, ಕರ್ನಾಟಕ ಕೊಳೆಚೆ ಅಭಿವೃದ್ಧಿ ಮಂಡಳಿ
• ಬಸವನಗೌಡ ದದ್ದಲ್ ಅಧ್ಯಕ್ಷರು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
• ರೂಪಕಲಾ ಎಂ. ಅಧ್ಯಕ್ಷರು, ಕರಕುಶಲ ಅಭಿವೃದ್ಧಿ ನಿಗಮ
• ಶರತ್ ಕುಮಾರ್ ಬಚ್ಚೇಗೌಡ ಅಧ್ಯಕ್ಷರು, ಕಿಯೋನಿಕ್ಸ್
• ಅನಿಲ್ ಚಿಕ್ಕಮಾದು ಅಧ್ಯಕ್ಷರು, ಜಂಗಲ್ ಲಾಡ್ಜಸ್
• ಸತೀಶ್ ಕೃಷ್ಣ ಸೈಲ್ ಅಧ್ಯಕ್ಷರು, ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ಸ್ & ಏಜೆನ್ಸೀಸ್
• ಕನೀಜ್ ಫಾತಿಮಾ ಅಧ್ಯಕ್ಷರು, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
ಇತರ ಮುಂದುವರಿಕೆ ಪಡೆದವರು:
• ಬಸವರಾಜ ಶಿವಣ್ಣ ಅರಣ್ಯ ಅಭಿವೃದ್ಧಿ ನಿಗಮ
• ಬಿ.ಜಿ. ಗೋವಿಂದಪ್ಪ ಆಹಾರ ನಿಗಮ
• ಹೆಚ್.ಸಿ. ಬಾಲಕೃಷ್ಣ ರಸ್ತೆ ಅಭಿವೃದ್ಧಿ ನಿಗಮ
• ಜಿ.ಎಸ್. ಪಾಟೀಲ್ ಖನಿಜ ನಿಗಮ
• ಸಿ. ಪುಟ್ಟರಂಗಶೆಟ್ಟಿ ಎಂಎಸ್ಐಎಲ್
• ಜೆ.ಟಿ. ಪಾಟೀಲ್ ಹಟ್ಟಿ ಚಿನ್ನದ ಗಣಿ
• ರಮೇಶ್ ಬಂಡಿಸಿದ್ದೇಗೌಡ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ
• ಬಿ.ಕೆ. ಗೋಪಾಲಕೃಷ್ಣ ಬೇಳೂರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ
• ಎಸ್.ಎನ್. ನಾರಾಯಣಸ್ವಾಮಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ
• ಟಿ. ರಘುಮೂರ್ತಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
• ಟಿ.ಡಿ. ರಾಜೇಗೌಡ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ
• ಬಸವನಗೌಡ ತುರುವಿಹಾಳ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ನಿಗಮ ಹಾಗೂ ಮಂಡಳಿಗಳ ಆಡಳಿತ ಕಾರ್ಯಚಟುವಟಿಕೆಗಳಿಗೆ ನಿರಂತರತೆ ಸಿಗಲಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

