

ರಾಜ್ಯಮಟ್ಟದ ರಾಷ್ಟ್ರೀಯ ಆವಿಷ್ಕಾರ ರಸಪ್ರಶ್ನೆ ಸ್ಪರ್ಧೆ ಡಿಡಿ ಚಂದನ ಕೇಂದ್ರ ಬೆಂಗಳೂರು. ಮೈಸೂರು ವಿಭಾಗದಿಂದ ಸ.ಹಿ.ಪ್ರಾ ಶಾಲೆ ಉಳ್ಳೂರು -11 5ನೇ ತರಗತಿಯ ವಚನ ಮತ್ತು ಹಾಸನದ ಸ ಹಿ ಪ್ರಾ ಶಾಲೆ ಹೊಳೆನರಸೀಪುರ 5ನೇ ತರಗತಿಯ ಹರ್ಷ ಇವರಿಬ್ಬರು ಪ್ರತಿನಿಧಿಸಿರುತ್ತಾರೆ. ವಚನ ದ್ವಿತೀಯ ಸ್ಥಾನವನ್ನು ಪಡೆದು ಉಳ್ಳೂರು ಸರಕಾರಿ ಶಾಲೆಯ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ವಚನಾಳಿಗೆ ಹಾಗೂ ತರಬೇತಿ ಗೊಳಿಸಿದ ಶಿಕ್ಷಕರಿಗೂ ಶಾಲಾ ಹಳೇವಿಧ್ಯಾರ್ಥಿ ಸಂಘ , ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ಸಾಧು ದೇವಾಡಿಗ ಹಾಗೂ ಚಂದ್ರ ದೇವಾಡಿಗ ಹಾಡಿಮನೆ ಉಳ್ಳೂರು 11 ಇವರ ಸುಪುತ್ರಿ ವಚನ ಸರಕಾರಿ ಶಾಲೆಯ ವಿದ್ಯಾರ್ಥಿನಿಯ ಈ ಪ್ರತಿಭೆಯನ್ನು ಹಾಗೂ ಊರ ಹೆಸರನ್ನು ರಾಜ್ಯಮಟ್ಟಕ್ಕೆ ಪರಿಚಯಿಸಿದ ಕೀರ್ತಿ ತಂದೆ ತಾಯಿಗೆ ಸಲ್ಲುತ್ತದೆ.




