The Fourth Day of Celebrations at St. Lawrence Basilica, Karkal–Attur


ಕಾರ್ಕಳ; ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನವಾದ ಬುದವಾರದಂದು ಮಹೋತ್ಸವದ ಮುಖ್ಯ ದಿನವಾದ್ದರಿಂದ ಬೆಳಗ್ಗೆಯಿಂದ ತಡ ರಾತ್ರಿ ತನಕ ಭಕ್ತರು ಭಾರೀ ಸಂಖ್ಯೆಯಲ್ಲಿ ಪುಣ್ಯಕ್ಷೇತಕ್ಕೆ ಹರಿದುಬಂದರು. ಸಂತ ಲಾರೆನ್ಸ್ ರವರ ಅತ್ಯದ್ಭುತ ಶಕ್ತಿಯುತ ಮಧ್ಯಸ್ಥಿಕೆಯಿಂದ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಿದರು. ಭಕ್ತರ ಭಾರೀ ಸಂಖ್ಯೆಯ ಕಾರಣ ವಾಹನಗಳನ್ನು ದೂರದಲ್ಲಿ ನಿಲ್ಲಿಸಲಾಗಿದ್ದು, ಜನರು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಸ್ಥಳಕ್ಕೆ ತಲುಪಿದರು. ಸಾಂಪ್ರದಾಯಿಕವಾಗಿ, ಭಕ್ತರು ಬಲಿಪೂಜೆಗೆ ಹಾಜರಾಗುವ ಮೊದಲು ಪಾಪ ನಿವೇದನಾ ಸಂಸ್ಕಾರವನ್ನು ಸ್ವೀಕರಿಸಲು ಸಾಲಿನಲ್ಲಿ ನಿಂತರು.
ದಿನಪೂರ್ತಿ ದೀರ್ಘ ಸಾಲೆ ಸಾಲು ಕಾಣಿಸಿಕೊಂಡವು. ಪಡೆದ ಕೃಪೆಗಳಿಗಾಗಿ ಕೃತಜ್ಞತೆಯ ಸಂಕೇತವಾಗಿ ಭಕ್ತರು ಬಲಿಪೂಜೆ ಅರ್ಪಣೆಗಳನ್ನು ಸಮರ್ಪಿಸಿದರು. ಸ್ಥಳದಲ್ಲಿದ್ದ ಯಾಜಕರು ರೋಗಿಗಳು ಮತ್ತು ಮಕ್ಕಳ ಮೇಲೆ ತಮ್ಮ ಹಸ್ತವನ್ನು ಚಾಚಿ ಆಶೀರ್ವದಿಸಿ ಅವರ ಆರೋಗ್ಯ ಮತ್ತು ಸುಭೀಕ್ಷೆಗಾಗಿ ಪ್ರಾರ್ಥಿಸಿದರು.
ಮಹೋತ್ಸವದ ಎರಡು ಪ್ರಮುಖ ಬಲಿಪೂಜೆಗಳು ನಡೆದವು.
ಬೆಳಿಗ್ಗೆಯ ಮಹಾಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನೆರವೇರಿಸಿದರು. ಸಂಜೆಯ ಬಲಿಪೂಜೆಯನ್ನು ಅಜ್ಮಿರ್ನ ನೂತನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಧರ್ಮಾಧ್ಯಕ್ಷ ಡಾ. ಜಾನ್ ಕಾರ್ವಾಲೋ ಅವರು ನೆರವೇರಿಸಿ ‘ತಮ್ಮ ಉಪದೇಶಗಳಲ್ಲಿ “ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿ, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭವಿಸಿ, ಅದನ್ನು ದೀನದಲಿತರಾದ ಸಹೋದರ ಸಹೋದರಿಯರೊಂದಿಗೆ ಹಂಚಿಕೊಳ್ಳುವ ಮೂಲಕ ವಿಸ್ತರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು.
ಇತರ ಬಲಿಪೂಜೆಗಳನ್ನು ವಿವಿಧ ಯಾಜಕರು ನೆರವೇರಿಸಿ ರೋಗಿಗಳ ಮೇಲೆ ಪ್ರಾರ್ಥಿಸಿದರು: ವಂ. ಸ್ಟೀವನ್ ಫೆರ್ನಾಂಡಿಸ್ (ಐಸಿವೈಎಂ ನಿರ್ದೇಶಕರು), ವಂ. ಅನಿಲ್ ಲೋಬೋ (ಸುಂಡೇಕೆರೆ, ಚಿಕ್ಕಮಗಳೂರು), ವಂ. ಕ್ಲಾನಿ ಡಿಸೋಜಾ (ಗ್ಲಾಡ್ಸಮ್ ಹೋಮ್, ಮಂಗಳೂರು), ವಂ. ಸುನಿಲ್ ಪಿಂಟೊ (ಕಡಬ ಶಾಲೆಯ ಪ್ರಾಂಶುಪಾಲರು), ವಂ. ಪ್ರದೀಪ್ ಕಾರ್ಡೋಜಾ (ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರು), ವಂ. ರೋಹಿತ್ ಡಿಕೋಸ್ಟಾ (ಮಂಗಳ ಜ್ಯೋತಿ ನಿರ್ದೇಶಕರು, ಮಂಗಳೂರು), ಮತ್ತು ವಂ. ರೋಹನ್ ಡಯಾಸ್, CSsR,ಸಭೆ (ಅಲಂಗಾರ್, ಮೂಡುಬಿದ್ರೆ).
ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊರವರು ಮಹೋತ್ಸವದ ಯಶಸ್ವಿ ಆಚರಣೆಗೆ ಸೂಕ್ತ ವ್ಯವಸ್ಥೆ ಮಾಡಿದ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುಗಳು, ಸಹಾಯಕ ಯಾಜಕರು ಮತ್ತು ಎಲ್ಲ ಭಕ್ತರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಬಸಿಲಿಕಾದ ಭವಿಸ್ಯ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಭಕ್ತರ ಪ್ರಾರ್ಥನೆಗಳನ್ನು ವಿನಂತಿಸಿದರು. ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಅವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಉತ್ಸವದ ಶುಭಾಶಯಗಳನ್ನು ಕೋರಿದರು.
ನಾಳೆ ಸಂಪ್ರದಾಯದಂತೆ “ಕೃತಜ್ಞತೆಯ ತಾಯಿ”ಯಾದ ಮಾತೆ ಮೇರಿಯವರ ಗೌರವಾರ್ಥ ಬಲಿಪೂಜೆ ಅರ್ಪಿಸಲಾಗುವುದು. ಸಂಜೆ 6.00 ಗಂಟೆಯ ಬಲಿಪೂಜೆಯೊಂದಿಗೆ ಮಹೋತ್ಸವದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಆ ಬಳಿಕ “ಜಗತ್ ಜ್ಯೋತಿ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
The Fourth Day of Celebrations at St. Lawrence Basilica, Karkal–Attur

Karkal;Today being Wednesday, the main day of the feast, devotees flocked to the Shrine
from early morning till late night, offering their supplications to God through the
powerful intercession of St. Lawrence the Martyr. Owing to the heavy rush of
devotees, vehicles were parked far away, and people walked nearly a kilometer to
reach the venue.
In keeping with tradition, the faithful approached the Sacrament of Confession
before attending the Mass, with long queues seen throughout the day. As a token of
gratitude for the favors received, the faithful offered Mass offerings. The priests
present at the venue blessed the sick and the children brought to them by distressed
families. Placing their consecrated hands upon them, the priests prayed for their
healing and well-being.
There were two main Masses. The morning Mass was celebrated by Most Rev. Dr.
Gerald Isaac Lobo, Bishop of Udupi, while the afternoon Mass was celebrated by
Most Rev. Dr. John Carvalho, the newly ordained Bishop of Ajmer. In their
homilies, both bishops explained the theme “I Have Loved You,” emphasizing
how one can experience Christ’s unconditional love and multiply it by sharing it
with the downtrodden brothers and sisters.
The other Masses were celebrated by the following priests, who also prayed over
the sick: Fr. Steevan Fernandes, Director, ICYM; Rev. Fr. Anil Lobo, Parish Priest,
Sundekere, Chikkamagaluru; Fr. Clany D’Souza, Gladsom Home, Mangalore; Fr.
Sunil Pinto, Principal, Kadaba School; Fr. Pradeep Cardoza, Assistant Parish
Priest, Milagres Cathedral; Fr. Rohith D’Costa, Director, Mangala Jyothi,
Mangalore; and Rev. Fr. Rohan Dias, CSsR, Alangar, Moodubidri.
Bishop Gerald expressed his heartfelt gratitude to all the devotees and the faithful
of the Parish of Attur, the Parish Priest, and the assistant priests for the meticulous
arrangements made for the successful celebration of the feast. He also requested
the prayers of all devotees for the successful completion of the future projects of
the Basilica. Ms. Rashmi, Assistant Commissioner of Kundapur division paid visit
to the shrine and wished the festive greetings.
Tomorrow’s Mass will traditionally be offered in honour of Mother Mary, the
Mother of Gratitude. With the Mass at 6.00 p.m., the festivities will come to an
end. A Yakshagana titled Jagathjyothi will be staged soon after the 6.00 p.m.
Mass.




