

ಕೋಟ ಸಂತ ಜೋಸೆಫರ ಇಗರ್ಜಿಯ ವಾರ್ಶಿಕ ತೆರಾಲಿ ಹಬ್ಬ ಬಹು ಸಡಗರದಿಂದ ಜನವರಿ ೨೧ ರಂದು ಆಚರಿಸಲಾಯಿತು. ಉಡುಪಿ ಧರ್ಮ ಪ್ರಾಂತ್ಯದ ಕುಲಪತಿಗಳಾದ ವಂದನೀಯ ಸ್ಟೀಫನ್ ಡಿಸೋಜಾರವರು ಪ್ರಧಾನ ಯಾಜಕರಾಗಿ ಸಂಭ್ರಮದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ವಿವಿಧ ಇಗರ್ಜಿಗಳ ಧರ್ಮಗುರುಗಳು ಬಲಿಪೂಜೆಯಲ್ಲಿ ಸಹಭಾಗಿಯಾದರು. ಭಕ್ತಾದಿಗಳು ಬಹುಸಂಖ್ಯೆಯಲ್ಲಿ ಹಾಜರಿದ್ದು ಸಂಭ್ರಮೊಲ್ಲಾಸದಿಂದ ಹಬ್ಬವನ್ನು ಆಚರಿಸಿದರು.
ಚರ್ಚಿನ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಅವರು ಹಬ್ಬಕ್ಕೆ ಆಗಮಿಸಿದ ಧರ್ಮಗುರುಗಳಿಗೆ, ಭಕ್ತಾದಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀಯುತ ರೋಹನ್ ಫುರ್ಟಾಡೊ ಅವರು ಚರ್ಚ್ನ ಕಛೇರಿಗೆ ಕೊಡಮಾಡಿದ ಹೊಸ ಡೆಸ್ಕ್ ಟೊಪ್ ಕಂಪ್ಯುಟರನ್ನು ಆಶೀರ್ವದಿಸಿ ಚಾಲನೆ ನೀಡಲಾಯಿತು.




























