

ಕುಂದಾಪುರ; ಹೊಸದಾಗಿ ಕುಂದಾಪುರದಲ್ಲಿ ಪ್ರಾರಂಭವಾದ ಸೈಂಟ್ ಫಿಲಿಫ್ ನೆರಿ ಸೊಸೈಟಿ, ಇದರ ಸ್ಥಾಪಕ ಅಧ್ಯಕ್ಷರಾಗಿ ವಾಲ್ಟರ್ ಡಿ’ಸೋಜಾ ಆನಗಳ್ಳಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯನ್ನು ಮುಖ್ಯ ಪ್ರವರ್ತಕರಾಗಿ ಸಂಸ್ಥೆಯನ್ನು ಸಂಘಟಿಸಿದ್ದ ಇವರು ದಿನಾಂಕ ೦೮-೦೧-೨೦೨೬ ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯನ್ನು ಸರಕಾರದ ಸಹಾಯಕ ನಿಬಂಧಕರ ಕಛೇರಿ ಕುಂದಾಪುರ ಇದರ ಅಧಿಕಾರಿಯಾದ ಎಂ. ಸಿ. ಸ್ವಾಮಿ ಇವರು ನೆರವೇರಿಸಿಕೊಟ್ಟರು. ಉಪಾಧ್ಯಕ್ಷರಾಗಿ ಅಲಿಷಾ ಡಿ’ಸೋಜಾ ಆಯ್ಕೆಯಾದರು.
ಸ್ವ-ಉದ್ಯೋಗಿಗಳಿಗೆ ನೆರವು ನೀಡುವ ಮುಖ್ಯ ಉದ್ದೇಶವಾಗಿದ್ದು, ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಬೇಕಾದ ಆನ್ಲೈನ್ ಅರ್ಜಿ ಸಲ್ಲಿಕೆ, ಹಣಕಾಸು ನೆರವು, ಮಾಹಿತಿ ಮತ್ತು ತರಬೇತಿ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಚುನಾವಣೆ ನಡೆಸಲು ನೆರವಾದ ಎಲ್ಲಾ ನಿರ್ದೇಶಕರಿಗೆ ಮತ್ತು ಸರಕಾರದ ಅಧಿಕಾರಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆ ಆಲಿಷಾ ಡಿ’ಸೋಜಾ ಧನ್ಯವಾದ ತಿಳಿಸಿದ್ದಾರೆ.

