

ಕೋಟ,ಜ. 18; ಜನವರಿ 20,21 ರಂದು ನಡೆಯಲಿರುವ “ತೆರಾಲಿ” ಹಬ್ಬದ ಪೂರ್ವಭಾವಿಯಾಗಿ ಭ್ರಾತೃತ್ವದ ಭಾನುವಾರವನ್ನು ಜನವರಿ 18 ರಂದು, ಕೋಟ ಸಂತ ಜೋಸೆಫರ ಇಗರ್ಜಿಯಲಿ ಆಚರಿಸಲಾಯಿತು.
ಉಡುಪಿ ಧರ್ಮ ಪ್ರಾಂತ್ಯದ ಸುವಾರ್ತೆ ಪ್ರಚಾರಕ ನಿರ್ದೇಶಕರಾದ ವಂದನೀಯ ಅಶ್ವಿನ್ ಅರಾನ ಅವರು ಪವಿತ್ರ ಪರಮ ಪ್ರಸಾದದ ಆರಾಧನೆ ಹಾಗು ಬಲಿಪೂಜೆಯನು ನೆರವೇರಿಸಿದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಸ್ಟಾನೀ ತಾವ್ರೂ ಅವರು ಸಹಕರಿಸಿದರು.

















