

ಕುಂದಾಪುರ, ಜ.12: 335 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕ ಧರ್ಮಗುರುರುಗಳಾದ ಸಂತ ಜೋಸೆಫ್ ವಾಜರಿಗೆ ಮುಖ್ಯಗುರುಗಳಾಗಿ ವಲಯ ಪ್ರಧಾನ ಇಗರ್ಜಿಯಾದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಗೆ ಭಡ್ತಿ ನೀಡಿ ಕಳುಹಿಸಿದ್ದು ಪ್ರಧಾನ ಧರ್ಮಗುರುಗಳಾಗಿ ಕೆನರಾದಾಂತ್ಯ ಸುತ್ತುತ್ತಾ ಯೇಸು ಕ್ರಿಸ್ತರ ಬೋಧನೆ ಮಾಡಿದವರು, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಪವಾಡಮಯ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು ಕಣ್ಣಾರೆ ಕಂಡಿದ್ದರು. ಇದರ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೋಲಿಕರಲ್ಲಿ ಅತ್ಯುನ್ನತ್ತ ಸಂತ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 18 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಆಚರಿಸಲಾಯಿತು.
ಪ್ರಸ್ತುತ ಯು.ಎಸ್. ಎ. ಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತೀರುವ ವಂ।ನೇವಿಲ್ ರೊಡ್ರಿಗಸ್ ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂತ ಜೋಸೆಫ್ ವಾಜ್ ಕೆನರಾದಲ್ಲಿ ಯೇಸುಕ್ರಿಸ್ತರ ಶುಭ ಸಂದೇಶ ಸಾರಿದ ಮಹಾತ್ಮರು, ನಂತರ ಶ್ರೀಲಂಕಾಗೆ ತೆರಳಿ ಅಲ್ಲಿಯೂ ಶುಭ ವಾರ್ತೆಯನ್ನು ಸಾರಿದ ಅವರು ಯೇಸು ಕ್ರಿಸ್ತರ ಹೆಸರಿನಲ್ಲಿ ಹಲವಾರು ಅದ್ಬುತಗಳನ್ನು ಮಾಡಿ ಸಂತ ಪದವಿಯನ್ನು ಪಡೆದರು, ಇಂತಹ ಮಹಾತ್ಮ ಕುಂದಾಪುರ ಇಗರ್ಜಿಯಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದು, ನೀವು ಭಾಗ್ಯಶಾಲಿಗಳು, ನಾವೆಲ್ಲ ಅವರನ್ನು ಮಾರ್ಗದರ್ಶಿಯನ್ನಾಗಿ ಮಾಡಿಕೊಂಡು ಉತ್ತಮ ಕ್ರೆಸ್ತರಾಗೋಣ” ಎಂದು ಸಂದೇಶ ನೀಡಿದರು.
ಧರ್ಮಕೇಂದ್ರದ ಧರ್ಮಗುರು ಹಾಗೂ ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕುಂದಾಪುರ ವಲಯದ ಪ್ರಧಾನರಾದ ವಂ।ಪೌಲ್ ರೇಗೊ ಸಹಬಲಿದಾನವನ್ನು ಅರ್ಪಿಸಿ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಈ ವಾರ್ಷಿಕ ಹಬ್ಬದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಹಲವಾರು ಧರ್ಮಭಗಿನಿಯರು, ಗುರಿಕಾರರು, ಪ್ರತಿನಿಧಿಗಳು ಸಂಘ ಸಂಸ್ಥೆಯವರು, ಹಾಗೂ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.




















































