

ಶ್ರೀನಿವಾಸಪುರ : ತಾಲೂಕಿನ ಕಸಬಾ ಹೋಬಳಿಯ ಚಲ್ದಿಗಾನಹಳ್ಳಿ ಗ್ರಾಮಪಂಚಾಯಿತಿಗೆ ಸಂಬಂಧಿಸಿದಂತೆ ಒಟ್ಟು 17 ಸದಸ್ಯರು ಇದ್ದು, 12 ಸದಸ್ಯರು ಡಿಸೆಂಬರ್ 20 ರಂದು ಪ್ರಸ್ತುತ ಇರುವ ಅಧ್ಯಕ್ಷರಾದ ಶ್ರೀನಿವಾಸ್ ವಿರುದ್ಧ ಅರ್ಜಿ ನೀಡಿ ಅವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಉಪವಿಭಾಗಧಿಕಾರಿ ಡಾ|| ಮೈತ್ರಿ ಗ್ರಾಮಪಂಚಾಯಿತಿ ಕಚೇರಿಗೆ ಬೇಟಿ ನೀಡಿ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಧ್ಯಕ್ಷರ ವಿರುದ್ಧ 12 ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸವನ್ನು ವ್ಯಕ್ತಪಡಿಸಲಾಗಿ ಸಭೆಯ ನಿರ್ಣಯವನ್ನು ಜಿಲ್ಲಾಚುನಾವಣಾಧಿರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಸಧ್ಯ ಚಲ್ದಿಗಾನಹಳ್ಳಿ ಗ್ರಾಮಪಂಚಾಯಿತಿಗೆ ಅಧ್ಯಕ್ಷರ ಸ್ಥಾನ ಖಾಲಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಚುನಾವಣಾಧಿಕಾರಿಗಳು ಈ ಚುನಾವಣೆಗೆ ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣಾ ದಿನಾಂಕವನ್ನು ನಿಗಧಿಪಡಿಸಲಾಗುವುದು ಎಂದರು.ಈ ಪಿಎಸ್ಐ ಜಯರಾಮ್, ಪಿಡಿಒ ಗೋಪಾಲರೆಡ್ಡಿ ಹಾಗು ಗ್ರಾ.ಪಂ ಸದಸ್ಯರು ಹಾಜರಿದ್ದರು.


