

ಕುಂದಾಪುರ : “ಕೆಲವರು ವೃತ್ತಿಯಿಂದ ನಿವೃತ್ತಿ ಹೊಂದಿದರೂ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ವಾಗಿರುತ್ತದೆ ಎಂದು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು. ಅವರು ಪುರಸಭೆಯಲ್ಲಿ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀಪತಿ ಕಲ್ಕೂರ್ ಆವರ ಬೀಳ್ಕೊಡುಗೆ ಸಮಾರಂಭ ದಲ್ಲಿಮಾತನಾಡಿದರು. ಪುರಸಭೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದವರು ಫಲಪುಷ್ಪ ಹಾಗೂ ಸ್ಮರಣಿಕೆ ಗಳನ್ನು ನೀಡಿ ನೆನಪು ಗಳನ್ನು ಹಂಚಿಕೊAಡರು. ಮಾಜಿ ಪುರಸಭಾ ಸದಸ್ಯರು, ಗುತ್ತಿಗೆದಾರರು ಭಾಗವಹಿಸಿ ನಿವೃತ್ತರಿಗೆ ನೆನಪಿನ ಕಾಣಿಕೆ ನೀಡಿ ಆವರ ವಿಶ್ರಾಂತ ಜೀವನಕ್ಕೆ ಶುಭ ಹಾರೈಸಿದರು.ಕಛೇರಿ ವ್ಯವಸ್ಥಾಪಕ ಜಿ. ಸೂರ್ಯಕಾಂತ ಖಾರ್ವಿ ನಿರೂಪಿಸಿದರು, ಸಹಾಯಕ ಗಣೇಶ್ ಪಿ. ವಂದಿಸಿದರು. ಪುರಸಭೆಯ ಸಿಬಂದಿಗಳು ಉಪಸ್ಥಿತರಿದ್ದು ಕಲ್ಕೂರ್ ಅವರಿಗೆ ಶುಭಕೋರಿದರು.

