

ಶ್ರೀನಿವಾಸಪುರ : ಶುಕ್ರವಾರ ತಮ್ಮ ಮನಗೆ ಬಂದ ಆಂಧ್ರದ ಚೀಕಲಬೈಲು ಗ್ರಾಮದ ನಿವಾಸಿ ಗಂಗುಲಮ್ಮರವರನ್ನ ಪರಿಚಿಯಿಸಿಕೊಂಡು ಗಂಗುಲಮ್ಮ ರವರೊಂದಿಗೆ ಕ್ಷೇಮಸಮಚಾರಗಳನ್ನು ಮಾತನಾಡುತ್ತಾ, ತಮ್ಮ ಹಳೆ ನನೆಪುಗಳನ್ನು ಮಾತನಾಡಿ ಗಂಗಲಮ್ಮ ರವರು ಅಡ್ಡಗಲ್ ಗ್ರಾಮದ ತಲಾರಿ ಗಂಗುಲಪ್ಪ ಮತ್ತು ಕದಿರೆಕ್ಕ ದಂಪತಿಗಳ ಐದನೇ ಮಗಳು ಈ ದಂಪತಿಗಳಿಗೆ ಒಟ್ಟು ಆರು ಜನ ಹೆಣ್ಣು ಮಕ್ಕಳು ಮೊದಲನೇ ಅವರು ಸೀತಕ್ಕ ನಂತರ ರಾಮಕ್ಕ ನಂತರ ಸಾಲಮ್ಮ ನಂತರ ನರಸಮ್ಮ ಐದನೇ ಅವಳು ಗಂಗೂ ಆರನೇವಳು ಸುಬ್ಬಮ್ಮ ಆರು ಹೆಣ್ಣು ಮಕ್ಕಳನ್ನು ಗಂಗುಲಮ್ಮ ಚೀಕಲುಬೈಲಿಗೆ ಅಡ್ಡಗಲ್ ನಿಂದ ಮದುವೆಯಾಗಿ ಹೋದವರು ಈಗ ಗಂಗೂ ಅಲಿಯಾಸ್ ಗಂಗುಲಮ್ಮ ಮತ್ತು ಸುಬ್ಬಮ್ಮ ಇಬ್ಬರು ಮಾತ್ರ ಉಳಿದಿದ್ದಾರೆ.
ತಮ್ಮ ಬಾಲ್ಯದ ನೆನೆಪುಗಳ ಬಗ್ಗೆ ನೆನೆಯುತ್ತಾ, ಇದೇ ಅಡ್ಡಗಲ್ ಗ್ರಾಮದಲ್ಲಿ ರಾಮಪ್ಪ ಮತ್ತು ತಿಪ್ಪಮ್ಮ ಎಂಬ ಬ್ರಾಹ್ಮಣ ಕುಟುಂಬದ ಕುಟುಂಬವು ಇತ್ತು ಅವರಿಗೆ ಎಂಟು ಜನ ಮಕ್ಕಳು ಅದರಲ್ಲಿ ಬದುಕಿ ಉಳಿದವರು ಆರು ಜನ ಮಾತ್ರ ಈಗ ಕೇವಲ ಮೂರು ಜನ ಮಾತ್ರ ಉಳಿದಿರುತ್ತಾರೆ ತಿಪ್ಪಮ್ಮ ರವರ ಎಂಟನೇ ಮಗು ರಮೇಶ್ ಕುಮಾರ್ ಎಂಬ ಹೆಸರಿನವರು.
ತಿಪ್ಪಮ್ಮ ನವರು ರಮೇಶ್ ಕುಮಾರ್ ರವರಿಗೆ ಪ್ರಸವ ಆದಾಗ ಅವರ ಆರೋಗ್ಯ ತೀವ್ರ ಹದೆಗಟ್ಟಿತ್ತು ಆಗಿನ ಸಂದರ್ಭಕ್ಕೆ ತಕ್ಕಂತೆ ಇಂದಿನ ಲಕ್ಷಿಪುರ (ಏರು ಕಾಲುವೆ) ಗ್ರಾಮದಲ್ಲಿದ್ದ ವೈದ್ಯರ ಸಲಹೆ ಮೇರೆಗೆ ರಮೇಶ್ ಕುಮಾರ್ ಅವರಿಗೆ ಹೆತ್ತ ತಾಯಿಯ ಸ್ಥನಪಾನ ನಿಷೇಧಿತವಾಯಿತು ಇನ್ನು ರಮೇಶ್ ಕುಮಾರ್ ಅವರು ಬದುಕಿ ಉಳಿಯುವುದೇ ಸಮಸ್ಯೆ ಆಯಿತು ಇದೇ ಸಮಯದಲ್ಲಿ ಪುಣ್ಯಕ್ಕೆ ತಲಾರಿ ಕದಿರೆಕ್ಕ ಅವರು ಪ್ರಸವಿಸಿದ್ದಳು ಇದೊಂದು ವಿಚಿತ್ರ ಸನ್ನಿವೇಶ ಅಂದು ಬ್ರಾಹ್ಮಣ ತಾಯಿಯ ಹೊಟ್ಟೆಯಲ್ಲಿ ಜನಿಸಿ ನಾಯಕರ ಸಮಾಜದ ತಲಾರಿ ಕದಿರಕ್ಕನ ಮೊಲೆ ಹಾಲು ಕುಡಿದು ನಮ್ಮೆಲ್ಲರಿಗೂ ಐಶ್ಚರ್ಯಕರವಾಗಿ ಕಾಣುವ ಮಹಾನ್ ನಾಯಕ ನಮ್ಮೆಲ್ಲರ ರಮೇಶ್ ಕುಮಾರ್ ರವರು
ಅಡ್ಡಗಲ್ ಗ್ರಾಮದ ತಮ್ಮ ಮನೆಯ ಮುಂದೆ ಕೂತಿದ್ದಾಗ ಗಂಗೂ ತನ್ನ ಎಂಜಲು ಹಾಲು ಕುಡಿದು ಬೆಳೆದು ದೊಡ್ಡವನಾದ ರಮೇಶ್ ಕುಮಾರ್ ರವರೊಂದಿಗೆ ಮಾತನಾಡಬೇಕೆಂದು ಬಯಸಿ ಬಂದಳು ರಮೇಶ್ ಕುಮಾರ್ ಅವರಿಗೆ ಅದೆಷ್ಟೋ ವರ್ಷಗಳ ನಂತರ ಈಕೆಯನ್ನು ನೋಡುವ ಸೌಭಾಗ್ಯ ತಾನೇ ತನ್ನನ್ನು ಪರಿಚಯಿಸಿಕೊಂಡು ನನ್ನ ಗುರುತು ಸಿಕ್ಕಲಿಲ್ಲವಾ ಎಂದು ಕೇಳಿದಳು ತಂದೆ-ತಾಯಿ ಅವಿಭಾಜ್ಯ ಕುಟುಂಬದಲ್ಲಿದ್ದ ಇಬ್ಬರು ಚಿಕ್ಕಪ್ಪಂದಿರು ಚಿಕ್ಕಮ್ಮಂದಿರು ಜೊತೆಯಲ್ಲೇ ಜನಿಸಿದ ಇಬ್ಬರು ಅಣ್ಣಂದಿರು ದೊಡ್ಡಕ್ಕ ಬಾಳ ಸಂಗಾತಿ ವಿಜಯಮ್ಮ ರವರು ಹಾಲು ಉಣಿಸಿದ ಕದಿರೆಕ್ಕ ಆಕೆಯ ಪತಿ ಗಂಗುಲಪ್ಪ ಮತ್ತು ಅವರ ನಾಲ್ಕು ಹೆಣ್ಣು ಮಕ್ಕಳು ಎಲ್ಲರೂ ಈ ಲೋಕವನ್ನು ಬಿಟ್ಟಿದ್ದಾರೆ ತನಗೆ ಒಂದು ಅಪರೂಪದ ನಿಧಿ ಸಿಕ್ಕಿತು ಎಂದು ಭಾವಿಸಿ ಗಂಗೂಳನ್ನು ಕರೆದು ಅಪ್ಪಿಕೊಂಡು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಭಾವುಕರಾದ ರಮೇಶ್ ಕುಮಾರ್ ರವರು.
ಇದೇ ಋಣಾನುಭಂದ ಇದೇ ಮಾನವೀಯತೆ ಒಂದೊಮ್ಮೆ ಉಚ್ಚ (ಮೇಳು) ಜಾತಿಯಲ್ಲಿ ಜನಿಸಿದವನೆಂದು ತಲಾರಿ ಕದಿರೆಕ್ಕನ ಮೊಲೆ ಹಾಲನ್ನು ಕುಡಿಯಲು ನಿರಾಕರಿಸಿದ್ದರೆ ಅಂದೇ ಗೊಟಕ್ ಅನ್ನುತ್ತಿದ್ದ ರಮೇಶ್ ಕುಮಾರ್ ರವರು.
ಗಂಗೂ ಮತ್ತು ಸುಬ್ಬು ಈ ಇಬ್ಬರಿಗೂ ಶುಭ ಹಾರೈಸಿ ಕೂತು ಅಲ್ಲಿಂದ ಮರೆಯಾದರು ರಮೇಶ್ ಕುಮಾರ್ ರವರು ಕಣ್ಣು ಒದ್ದೆಯಾಗಿತ್ತು ಮನಸ್ಸು ಹತೋಟಿ ತಪ್ಪಿದಂತೆ ಕಾಣುತ್ತಿತ್ತು . ಗಂಗೂ ಮತ್ತು ಸುಬ್ಬು ಈ ಇಬ್ಬರಿಗೂ ಶುಭ ಹಾರೈಸಿ ಕೂತು ಅಲ್ಲಿಂದ ಮರೆಯಾದರು ರಮೇಶ್ ಕುಮಾರ್ ರವರು ಕಣ್ಣು ಒದ್ದೆಯಾಗಿತ್ತು ಮನಸ್ಸು ಹತೋಟಿ ತಪ್ಪಿದಂತೆ ಕಾಣುತ್ತಿತ್ತು

