

ಕುಂದಾಪುರ, ಡಿ. 29; ಕುಂದಾಪುರ ನಗರದೊಳೊಗೆ ಈ ಹಿಂದೆ ನಡೆದಿಲ್ಲದಂತಹ ಭೀಕರ ದುರಂತ. ಕುಂದಾಪುರದ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ಡಿ.29 ರ ಬೆಳಗಿನ ಜಾವ 2 ಗಂಟೆಗೆ ನಡೆಯಿತು. ಕುಂದಾಪುರ ನಗರದಲ್ಲಿಖ್ಯಾತ ಪುಸ್ತಕದ ಮಳಿಗೆ ಮತ್ತು ಪಠಾಕಿ ಮಳಿಗೆಯಾಗಿದ್ದ ಜನಾರ್ಧನ ಭಟ್ ಎಂದೇ ಖ್ಯಾತರಾಗಿದ್ದ ಅವರ ಮಳಿಗೆಗೆ ಬೆಂಕಿ ತಗಲಿ ಕೋಟಿ ಕಟ್ಟಲೆ ರೂಪಾಯಿ ಸ್ವತ್ತು ನಾಶವಾಗಿದೆ.
ಇಂದು ಮಧ್ಯಾನ್ನ 1.36 ಕ್ಕೆ ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಎರಡು ಫಾಯರ್ ಎಂಜಿನ್ ಗಾಡಿಗಳು ಸ್ಥಳದಲ್ಲಿ ಇದ್ದು, ಒಂದು ಸೇವಲ್ ಮೇಷಿನ್ ಸುಟ್ಟು ಬೂದಿಯಾದ ಪುಸ್ತಕದ ಗೊಬ್ಬರ ತುಂಬಿ ಒಂದು ಲಾರಿಗೆ ಸುರಿದು ತೆರವು ಗೊಳಿಸುವ ಕಾರ್ಯಾಚರಣೆ ನಡೆಯುತಿತ್ತು. ಅಲ್ಲಲ್ಲಿ ಹೊಗೆ ಎದ್ದೇಳುತಿತ್ತು. ಎಲ್ಲಿ ಬೆಂಕಿ ಎಳುತ್ತೊ ಆ ಕೂಡಲೇ ಫಾಯರ್ ಎಂಜಿನ್ಗಳು ತಮ್ಮ ಕಾರ್ಯಾಚರಣೆಗೆ ಸಿದ್ದವಿದ್ದವು. ಒಂದು ಕ್ರೈನ್ ಕೂಡ ಕಾರ್ಯಾಚರಣೆ ಮಾಡುತಿತ್ತು.
ಆ ರಥ ಬೀಧಿ ಕೆಲವರಿಗೆ ಆಪ್ತವಾಗಿತ್ತು ಮನೆಮದ್ದಿಗೆ ಬೇಕಾದ ಅಪರೂಪದ ಗಿಡಮೂಲಿಕೆಗಳು ಆ ಪರಿಸರದಲ್ಲಿ ದೊರಕುತಿದ್ದವು. ಯಾವುದೇ ಪೂಜೆ, ಪುನಸ್ಕಾರದಿಂದ ಹಿಡಿದು ಸಾವು, ಶ್ರಾದ್ಧದ ಕೆಲಸಕ್ಕೂ ಬೇಕಾದ ಎಲ್ಲ ಧಾರ್ಮಿಕ ಪರಿಕರಗಳು ಸಿಗುತ್ತಿದ್ದವು, ಆಲ್ಲಿನ ಜನಾರ್ಧನ ಭಟ್ ಇವರ ಅಂಗಡಿ ಬೆಂಕಿ ತಾಗಿ ಪಕ್ಕದಲ್ಲಿದ್ದ ಈ ಅಂಗಡಿಗಳು ಬೆಂಕಿಗೆ ತುತ್ತಾಗಿವೆ. ಜನಾರ್ಧನ ಭಟ್ ಇವರ ಅಂಗಡಿಯಂತ್ತು ಸುಟ್ಟು ಭಸ್ಮವಾಗಿದೆ.
ಕಟ್ಟಡ ಬಹಳ ಹಳೆಯದಾಗಿದ್ದು ಮರಮಟ್ಟುಗಳಿಂದ ರಚನೆಯಿಂದಕೂಡಿದಾಗಿದ್ದು, ಜೊತೆಗೆ ಪಟಾಕಿ, ಪುಸ್ತಕಗಳು ಇದ್ದದರಿಂದ ಬೆಂಕಿ ತಾಂಡವಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಮಾಹಿತಿ ಸಿಕ್ಕ ತಕ್ಷಣ ಅಗ್ನಿಶಾಮಕ ದಳದವರಿಗೆ ಬೇಗನೇ ತಲುಪಲು ಸಾಧ್ಯವಾಗುತಿರಲಿಲ್ಲ, ಕಾರಣ, ನಮ್ಮ ಅಗ್ನಿ ಶಾಮಕ ದಳ ಕೋಣಿಯಲ್ಲಿ ಇದೆ, ಅದೂ ಸಪೂರವಾದ ರಸ್ತೆಯಿಂದ ಧಾವಿಸಿ ಬರಬೇಕು. ಮತ್ತೊಂದು ಅಗ್ನಿಶಾಮಕ ಉಡುಪಿಯಿಂದ ಬರಬೇಕು, ಮತ್ತೊಂದು ಬೈಂದೂರುನಿಂದ ಬರಬೇಕು, ಹೀಗಿರುವಾಗ ಸುದ್ದಿ ಸಿಕ್ಕಿದ ತಕ್ಷಣ ಅಗ್ನಿ ಶಾಮಕ ದಳ ಹೊರಟರೂ, ಇಲ್ಲಿ ಮುಟ್ಟುವಷ್ಟರಲ್ಲಿ ಬೆಂಕಿ ವ್ಯಾಪಿಸಿದೆ. ಉದ್ದಕ್ಕೂ 5/6 ಅಂಗಡಿಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳದವರ ಸಾಹಾಸ ಶ್ಲಾಘನೀಯ.





