

ಕುಂದಾಪುರ. ದಿನಾಂಕ 24-12-2025 ಬುಧವಾರದಂದು ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ರೆ. ಫಾ. ಪಾವ್ಲ್ ರೇಗೋ ರವರು ಮಾತನಾಡಿ ನಮ್ಮಲ್ಲಿ ಪರಸ್ಪರ ಸಹಬಾಳ್ವೆ ಇರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ನಮ್ಮಲ್ಲಿರಬೇಕು. ಶಾಂತಿ, ಪ್ರೀತಿ, ಸಂತೋಷ ಎಲ್ಲರಲ್ಲಿರಲಿ ಎನ್ನುತ್ತಾ ಕ್ರಿಸ್ಮಸ್ ಸಂದೇಶದೊಂದಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೇರ್ನಾಂಡೀಸ್ ರವರು, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳಾದ ಪೃಥ್ವಿರಾಜ್ ಗಾಣಿಗ ಹಾಗೂ ಅರ್ಚನಾ ಉಪಸ್ಥಿತರಿದ್ದು, ಪ್ರಾಂಶುಪಾಲರು ನಮ್ಮ ಆಲೋಚನೆಗಳು ಸೃಜನಾತ್ಮವಾಗಿರಬೇಕು. ನಮ್ಮ ಉತ್ತಮ ಕೆಲಸ ಕಾರ್ಯಗಳಿಗೆ ದೇವರ ಕೃಪೆ ಇರುತ್ತದೆ. ಸಹಾಯ, ಸಹಕಾರ ಎಲ್ಲರಲ್ಲಿ ಇರಬೇಕು ದೇವರ ಆಶೀರ್ವಾದದೊಂದಿಗೆ ನಮ್ಮ ಜೀವನ ಬೆಳಕಾಗುತ್ತದೆ ಎನ್ನುತ್ತಾ ಉದಾಹರಣೆಯೊಂದಿಗೆ ಶುಭ ಹಾರೈಸಿದರು.
ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ಶಾನೀತ್ ವಾಜ್ ಸ್ವಾಗತಿಸಿ, ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರಿನ್ಸಿಯಾ ಬರೆಟ್ಟೊ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರೀತಿಷಾ ಕಾರ್ಯಕ್ರಮ ನಿರೂಪಿಸಿದರು.
ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಿಯೋನಾ ಹಾಗೂ ಸಂಗಡಿಗರ ಕಿರು ರೂಪಕ, ನೃತ್ಯ ಹಾಗೂ ಕ್ರಿಸ್ಮಸ್ ಹಾಡು ಆಕರ್ಷಣೆಯ ಗೋದಲಿ ವಿದ್ಯಾರ್ಥಿಗಳಿಗೆ ಕೇಕ್ ವಿತರಣೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.















