

ಮಂಗಳೂರು; ಕೊಂಕಣಿಯ ಖ್ಯಾತ ಸಾಹಿತಿ ವಾಲೇರಿಯನ್ ಕ್ವಾಡರ್ಸ್ ಇವರ ಆಶಾವಾದಿ ಪ್ರಕಾಶನದ ಬೆಳ್ಳಿ ಹಬ್ಬ ಮತ್ತು ಪಯ್ಣಾರಿ ಸುದ್ದಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ವೇಳೆ, ಕೊಂಕಣಿಯಲ್ಲಿ ಸಾಹಿತ್ಯ, ಸಾಮಾಜಿಕ ಸೇವೆ, ಇನ್ನಿತರ ಕ್ಷೇತ್ರದಲ್ಲಿ ವಿಶೇಷ ಸೇವೆ ನೀಡಿದ ದಿಖ್ಖರ ಜೊತೆ ಕುಂದಾಪುರದ ಖ್ಯಾತ ಸಾಹಿತಿ, ಕವಿ, ನಾಟಕಾರ, ಹಾಗೂ ಮಾಧ್ಯಮದ ಇವರ ಸೇವೆಯನ್ನು, ಪರಿಗಣಿಸಿ, ಮಂಗಳೂರಿನ ಹಂಪನ್ನಕಟ್ಟೆಯ ಎಮ್. ಸಿ. ಸಿ. ಬ್ಯಾಂಕಿನ ಸಭಾಭವನದಲ್ಲಿ ನಡೆದ ಸಂಭ್ರಮದಲ್ಲಿ ಗೌರವ ನೀಡಿ, ಸನ್ಮಾನಿಸಿ ಪುರಸ್ಕರಿಸಲಾಯಿತು.
ಬರ್ನಾಡ್ ಡಿಕೋಸ್ತಾ ಇವರು ಕುಂದಾಪುರ ಮೂಲದ ಖ್ಯಾತ ಸಾಹಿತಿ, ನಾಟಕಕಾರಾಗಿದ್ದು, ಕೊಂಕಣಿಯಲ್ಲಿ ಅಲ್ಲದೆ ಕನ್ನಡದಲ್ಲಿಯೂ ಸಾಹಿತ್ಯ, ನಾಟಕಗಳನ್ನು ರಚಿಸಿದ್ದಾರೆ, ಕುಂದಪ್ರಭ ಪತ್ರಿಕೆಯಲ್ಲಿ ಇವರ ಅಗಾಧವಾದ ಸಾಹಿತ್ಯ ಪ್ರಕಟಗೊಂಡಿದೆ.
ಇವರ ಜೊತೆ ಕೊಂಕಣಿಯ ವಿವಿಧ ಕ್ಷೇತ್ರಗಳಲ್ಲಿ ದಿಘ್ಘಜರಾದ, ಕ್ಲಾರಾ ಅರುಣ್ ಡಿಕುನ್ಹಾ ಅಜೆಕಾರ್ (ಸಮಾಜಿಕ ಸೇವೆ) ರಮೋನಾ ಇವೆಟ್ ಪಿರೇರಾ (ನಾಟ್ಯ) ಕ್ರಿಸ್ಟೋಫರ್ ಡಿಸೋಜ್ ನೀನಾಸಮ್ (ರಂಗ್ಮಂಚ) ವಿಲ್ಲನ್ ಡಿಸೋಜ್, ಕಯ್ಯಾರ್ (ಕಲಾ) ಗ್ಲ್ಯಾನಿಶ್ ಮಾರ್ಟಿಸ್ ಅಲಂಗಾರ್ (ಸಾಹಿತ್ಯ) ರೋಹಿತ್ ಸಾಂಕ್ತುಸ್ (ಸಮಾಜಿಕ ಸೇವೆ) ಆವಿಲ್ ರಸ್ಕೀನ್ಹಾ (ಮೌಲ್ಯಾಧಾರಿತ ಪತ್ರಿಕೋಧ್ಯಮ ಪುರಸ್ಕಾರ) ನೀಡಿ, ಸನ್ಮಾನಿಸಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕೊಂಕಣಿಯ ದಿಖ್ಖಜರಾದ, ಫಾ। ರುಷೇಶ್ ಮಾಡ್ತಾ, ಡೊ.ಜಯವಂತ ನಾಯ್ಕ್ ಶಾಲಿನಿ ವಾಲೆನ್ಸಿಯಾ, ಡೇವಿಡ್ ಡಿಸೋಜ್ ಅಜೆಕಾರ್, ಶೈಲೇಂದ್ರ ಮೆಹ್ತಾ, ಚಾರ್ಲ್ ಲೋಬೊ, ಅ್ಯಂಡ್ರೂ ಎಲ್. ಡಿಕುನ್ಹಾ, ಎಚ್ಚೆಮ್ ಪೆರ್ನಾಲ್, ಫಾ। ಚೇತನ್ ಲೋಬೊ, ಮೆಲ್ಟಿನ್ ರೊಡ್ರಿಗಸ್, ಫಾ। ಆಲ್ವಿನ್ ಸೆರಾವೊ, ಡೊ. ಎಡ್ಬರ್ಡ್ ಎಲ್ ನಜ್ರೆತ್, ವಿನ್ಸಿ ಕ್ಹಾಡ್ರಸ್, ಎಚ್. ಆರ್.ಆಳ್ವ, ಎಮ್. ಸಿ. ಸಿ. ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ, ಜೋನ್ ಪೆರ್ಮನ್ನೂರ್, ವಾಯ್ಲೆಟ್ ಜೆ. ಪಿರೇರಾ, ಸಾವ್ರಾಟ್ ಭೊಜೆ, ಕೊನ್ಸೆಪ್ಪಾ ಫೆರ್ನಾಂಡಿಸ್ ಆಳ್ಬ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಸ್ತಿ ವಾಮನ್ ಶೆಣಯ್ ಸ್ಮಾರಕ್ ಪುಸ್ತಕ್ ಪ್ರಕಾಶನದ ಸಹಕಾರದಿಂದ 25 ಪುಸ್ತಕಗಳನ್ನು ಲೊಕಾರ್ಪಣೆ ಮಾಡಲಾಯಿತು.








