

ಮಂಗಳೂರು ಧರ್ಮಕ್ಷೇತ್ರದ ಅಲಂಗಾರ್ ಚರ್ಚ್ ನ ಹೆಲೆನ್ ಲೋಬೊ ಅದರು ತಮ್ಮ ಒಲವು, ಭಕ್ತಿ ಮತ್ತು ತಾಳ್ಮೆಯ ಮೂಲಕ ಇಡೀ ಕೈಸ್ತ ಸಮುದಾಯಕ್ಕೆ. ಮಾದರಿಯಾಗಿದ್ದಾರೆ. ಕೇವಲ 11 ತಿಂಗಳ ಅವಧಿಯಲ್ಲಿ ಪವಿತ್ರ ಬೈಬಲ್ ನ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಬರೆದ ಅವರು. ಅಲಂಗಾರು ಸಮುದಾಯದ ನಂಬಿಕೆಯ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವುದು ವಿಶೇಷ.
ಪರಿಶ್ರಮದಿಂದ ಕೇವಲ ಏಳು ತಿಂಗಳಲ್ಲೇ ಹೊಸ ಒಡಂಬಡಿಕೆ ಪೂರ್ಣಗೊಂಡಿತು. ಧರ್ಮಗುರುಗಳಿಗೂ ಈ ಸಾಧನೆ ದೊಡ್ಡ ಆಶ್ಚರ್ಯ ತಂದಿತು.
ಹೂವಿನ ಉದ್ಯಮದಲ್ಲಿ ಬೆಳಿಗ್ಗೆ 9ರಿಂದ 11 ಗಂತೆಯ ತನಕ ಕೆಲಸವನ್ನು ಮುಗಿಸಿ, ನಂತರ. ಕೊಂಕಣಿ ಭಾಷೆಯಲ್ಲಿ ಬೈಬಲ್ ಬರೆಯುವ ಕೆಲಸವನ್ನು ದಿನಕ್ಕೆ 50 ಪುಟಗಳ ಶ್ರಮ ತೆಗೆದುಕೊಂಡು ಹೆಲೆನ್ ಏಳು ತಿಂಗಳಲ್ಲಿ ಹೊಸ ಒಡಂಬಡಿಕೆ ಪೂರ್ಣಗೊಳಿಸಿದಳು
2022ರಲ್ಲಿ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅಲಂಗಾರ್ ಚರ್ಚ್ ಗೆ ಅಧಿಕೃತ ಭೇಟಿ ನೀಡಿದಾಗ, “ಬೈಬಲ್ ಓದುತ್ತೀರಾ?” ಎಂಬ ಬಿಷಪ್ ಪ್ರಶ್ನೆಗೆ ಅನೇಕರಿಂದ.
ಪ್ರತಿಕ್ರಿಯೆ ಸಿಕ್ಕಿತು. ಆದರೆ “ಬೈಬಲ್ ಬರೆದಿದ್ದೀರಾ” ಎನ್ನುವ ಪ್ರಶ್ನೆ ಕೇಳಿದಾಗ ಕೇವಲ ಮೌನವೇ ಉತ್ತರವಾಗಿತ್ತು. ಈ ನಿಶ್ಶಬ್ದವೇ ಹೆಲೆನ್ ಅವರ ಮನದಲ್ಲಿ ಬಿಷಪ್ ಅವರ ಪ್ರಶ್ನೆಯಿಂದ ಪ್ರೇರಣೆ ಹುಟ್ಟಿ ಬೈಬಲ್ ಬರೆಯುವಲ್ಲಿ ಭಿಜಾಂಕುರವಾಯಿತು. ಅದಕ್ಕೆ ತಕ್ಕನಂತೆ 2023ರಲ್ಲಿ ಅಲಂಗಾರ್ ಧರ್ಮಕೇಂದ್ರವು ಹಿರಿಯರಿಗಾಗಿ ಕೈಬರಹದಲ್ಲಿ ಬೈಬಲ್ ಬರೆಯುವ ಸ್ಪರ್ಧೆ ಘೋಷಿಸಿತು. ಒಂದು ವರ್ಷದೊಳಗೆ ಇಡೀ ಬೈಬಲ್ ಬರಹದ ಮೂಲಕ ಪೂರ್ಣಗೊಳಿಸುವುದು ಅದರ ಷರತ್ತಾಗಿತ್ತು. ಈ ಸ್ಪರ್ಧೆಯೇ ಹೆಲೆನ್ ಅವರಿಗೆ ಮತ್ತೊಂದು ಛಲ ವಾಗಿ ಗುರಿ ನೀಡಿತು.
ಬೆಳಗ್ಗೆ 3 ಗಂಟೆಗೆ ಎದ್ದು ಮಗನಿಗೆ ಚಹಾ ನೀಡಿ, ಪ್ರಾರ್ಥನೆ, ಮನ ಕೆಲಸಗಳ ನಡುವೆ ಪ್ರತಿದಿನ ಬರೆಯಬೇಕಾದ ಪುಟಗಳನ್ನು ನಿಗದಿ ಮಾಡಿ, ಅದನ್ನು ಸಾಧಿಸುವಲ್ಲಿ ನಿರಂತರ ಶ್ರಮ ಪಟ್ಟ ಅವರು 11 ತಿಂಗಳಲ್ಲೇ ಹಳೆಯ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆಗಳನ್ನು ಪೂರ್ಣಗೊಳಿಸಿದರು.
ಈ ಕಾರ್ಯದಲ್ಲಿ ಹೆಲೆನ್ ಅವರ ಗಂಡ ಚಹಾ-ಊಟ ತಯಾರಿಸುದಲ್ಲಿ ನೆರವಾದರೆ, ಮಕ್ಕಳು ಸಹಕರಿಸಿದರು
ಹಳೆಯ ಒಡಂಬಡಿಕೆಯಲ್ಲಿ ಬರುವ ಹೆಸರುಗಳನ್ನು ಬರೆಯವಲ್ಲಿ ಹೆಲೆನ್ ಅವರಿಗೆ ಕಷ್ಟವಾಗುತ್ತಿತ್ತು. ಹಲವು ಬಾರಿ ಪರಿಶೀಲಿಸಿ ಮತ್ತೆ ಮತ್ತೆ ಬರೆಯಬೇರಾಗುತ್ತಿತ್ತು. ಹೊಸ ಒಡಂಬಡಿಕೆಯಲ್ಲೂ ಪ್ರತಿಯೊಂದು ಪುಟವೂ ತಪ್ಪಿಲ್ಲದೇ ಬರೆಯುವ ಜಾಗ್ರತೆಯಿಂದ ಬರೆದರು.
ಸಮುದಾಯದ ಗೌರವ – ರೂಪಾಯಿ 11,111 ಬಹುಮಾನ: ಅಲಂಗಾರ್ ಚರ್ಚ್ ನಲ್ಲಿ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಕೈಬರಹದಲ್ಲಿ ಬರೆದ ಏಕೈಕ ವ್ಯಕ್ತಿಯಾಗಿ ಹೆಲೆನ್ ಲೋಬೊ ಆಯ್ಕೆಗೊಂಡರು. ಅವರಿಗೆ ಪ್ರಥಮ ಲಭಿಸಿತು.ಬಹುಮಾನವಾಗಿ ರೂಪಾಯಿ 1111 ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸ್ಪರ್ಧೆಯನ್ನು ಆಯೋಜಿಸಿದ್ದ ಅಂದಿನ ಚರ್ಚ್ ಪ್ರಧಾನ ಧರ್ಮಗುರು ವಂದನೀಯ. ಫಾದರ್ ವಾಲ್ಟರ್ ಡಿಸೋಜ ಅವರಿಗೆ ಹೆಲೆನ್ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ಅವರಿಗೆ ವಿಶ್ವದಾಖಲೆ ಮಾಡುವ ಆಸಕ್ತಿ ಇರಲಿಲ್ಲ; ಸಮುದಾಯದ ನಂಬಿಕೆಯನ್ನು ಗಟ್ಟಿಗೊಳಿಸುವುದೇ ಪ್ರಮುಖ ಗುರಿ ಆಗಿತ್ತು ಎಂದು ಹೇಳುತ್ತಾರೆ ಹೆಲೆನ್.
ಸಮುದಾಯಕ್ಕೆ ಹೆಲೆನ್ ನೀಡಿದ ಸ್ಫೂರ್ತಿದಾಯಕ ಸಂದೇಶ: ಹೆಲೆನ್ ಲೋಬೊ ಅವರ ಮಾತುಗಳಲ್ಲಿ ಜೀವನದ ನಂಬಿಕೆಯ ಸಾರ ಹೀಗಿದೆ– “ದೇವರ ವಾಕ್ಯ ಓದಿ, ಬರೆದು, ಪಾಲಿಸಿದರೆ ಕುಟುಂಬದಲ್ಲಿ ಸಮಾಧಾನ ಬರುತ್ತದೆ. ಬೈಬಲ್ನಿಂದ ನಮ್ಮ ಮನೆ ಬೆಳಗಿದೆ. ಹೆಚ್ಚಿನ ವಿದ್ಯಾಭ್ಯಾಸ ಇರದಿದ್ದರೂ ನಮ್ಮ ಮಕ್ಕಳು ಒಳ್ಳೆಯ ಸ್ಥಾನ ಗಳಿಸಿದ್ದಾರೆ. ಅದು ದೇವರ ವಚನದ ಕೃಪೆ. ಆದ್ದರಿಂದ ಎಲ್ಲರೂ ಬೈಬಲ್ ಓದಿ, ಬರೆದು, ಬದುಕಿನಲ್ಲಿ ಅನುಸರಿಸಿ” ಎಂದು ಕರೆ ನೀಡಿದರು.
ಹೆಲೆನ್ ಲೋಬೊ ಅವರ ಕೈಬರಹದ ಈ ಪವಿತ್ರ ಯಾತ್ರೆ ಅಲಂಗಾರ್ ಧರ್ಮಕೇಂದ್ರಕ್ಕೆ ಅಲ್ಲದೆ ಎಲ್ಲಾ ಧರ್ಮಕೇಂದ್ರಗಳಿಗೆ ಪ್ರೇರಣೆಯಾಗಿದೆ.
ಹೆಲೆನ್ ಅವರ ಈ ವಿಷೇಶ ಸಾಧನೆಗೆ ಅಲಂಗಾರ್ ಚರ್ಚ್ ನ ಪ್ರಸ್ತುತ ಪ್ರಧಾನ ಧರ್ಮಗುರು ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ, ಧರ್ಮಗುರು ವಂ। ಫಾದರ್ ರೋಬರ್ಟ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಡ್ವರ್ಡ್ ಸೆರಾವೊ, ಕಾರ್ಯದರ್ಶಿ ಲಾರೆನ್ಸ್ ಅನಿಲ್ ಡಿಕುನ್ಹಾ, ಆಯೋಗಗಳ ಸಂಯೋಜಕ ರಾಜೇಶ್ ಡಿಸೋಜ ಕಡಲಕೆರೆ, ಎಲ್ಲಾ ಭಕ್ತಾಧಿಗಳು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮೂಡಬಿದ್ರೆ ವಲಯದ ಅಧ್ಯಕ್ಷ ಆಲ್ವಿನ್ ರೂಡ್ರಿಗಸ್, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಘನ ಕಾರ್ಯಕ್ಕೆ ಜನನುಡಿ ಸುದ್ದಿ ಸಂಸ್ಥೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತದೆ.



