

ಶ್ರೀನಿವಾಸಪುರ ; ಪ್ರಾಚೀನ ಬಾಷೆಯಾದ ಕನ್ನಡವನ್ನು ನಮ್ಮ ರಾಜ್ಯದ ಗಡಿಬಾಗಗಳಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ಪಣ ತೊಡಬೇಕು. ಕನ್ನಡ ಬಾಷೆಯನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದರು.
ಗಡಿಬಾಗವಾದ ನಮ್ಮ ತಾಲ್ಲೂಕನ್ನು ಕನ್ನಡಬಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ನಮ್ಮ ನಾಡು-ನುಡಿ ಜಲವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರೂ ಕನ್ನಡದ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು, ಪ್ರತಿ ಕನ್ನಡಿಗನ ಕರುನಾಡಿನ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ ವಾಗಿದ್ದು ಕರ್ನಾಟಕ ಮೊದಲು ಮೈಸೂರು ಪ್ರಾಂತ್ಯವಾಗಿತ್ತು, ಎಂದ ಇವರು ನಮ್ಮ ರಾಜ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಕನ್ನಡ ಬಾಷೆಗೆ 2000 ವರ್ಷಗಳ ಇತಿಹಾಸವಿದೆ, ವರ್ಷಕ್ಕೊಮ್ಮೆ ರಾಜ್ಯೋತ್ಸವ ಹೆಸರಿನಲ್ಲಿ ಹಬ್ಬ ಆಚರಿಸುವ ಮಾತ್ರಕ್ಕೆ ಬಾಷೆ ಉಳಿಯುವುದಿಲ್ಲಾ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಬಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ನಮ್ಮ ಭಾಷೆ ಉಳಿಯುತ್ತದೆ, ಕನ್ನಡ ನಾಡ-ನುಡಿಯ ರಕ್ಷಣೆ ಹಾಗು ಗಡಿಬಾಗಗಳ ರಕ್ಷಣೆಗೆ ಪ್ರತಿಯೊಬ್ಬ ಯುವಕರು ಬಾಷೆಯನ್ನು ಉಳಿಸುವ ಕರ್ತವ್ಯ ನಿಮ್ಮ ಮೇಲಿದ್ದು ಕರ್ನಾಟಕದ ಗತ ಕಾಲದ ವೈಭವವನ್ನು ಸ್ಮರಿಸುವುದೊಂದಿಗೆ ಮಾತೃಭಾಷೆ ಅಭಿವೃದ್ದಿಗಾಗಿ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ ಕನ್ನಡಬಾಷೆಯ ಬಗ್ಗೆ ಬಾಷಾಭಿಮಾನವಿರಲಿ ಆದರೆ ದುರಾಭಿಮಾನಬೇಡ ದೀಪದಿಂದ ದೀಪ ಬೆಳಗುವಂತೆ ಕನ್ನಡ ಭಾಷೆ ಪ್ರಪಂಚದಾದ್ಯಂತ ಪಸರಿಸಲಿ ಕನ್ನಡ ಭಾಷೆ ಶ್ರೀಮಂತವಾಗಿದ್ದು ಇದನ್ನು ಉಳಿಸಿ ಬೆಳಸುವ ಹೊಣಗಾರಿಕೆ ನಮ್ಮಲ್ಲೆರ ಮೇಲಿದೆ ಎಂದರು.
ಸಂಸದ ಮಲ್ಲೇಶ್ಬಾಬು, ಇಒ ಕೆ.ಸರ್ವೆಶ್, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಜೆಡಿಎಸ್ ಪಕ್ಷದ ಮುಖಂಡ ಸಿಎಂಆರ್. ಶ್ರೀನಾಥ್, ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಕಲ್ಲೂರು ಗ್ರಾ.ಪಂ ಅಧ್ಯಕ್ಷ ಶಂಕರರೆಡ್ಡಿ, ಮುಖಂಡರಾದ ಕೃಷ್ಣಾರೆಡ್ಡಿ, ಪೂಲುಶಿವಾರೆಡ್ಡಿ , ಚೈತನ್ಯ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾರುಬಾಬು, ಬಿ.ವಿ.ರೆಡ್ಡಿ, ಆಟೋ ಜಗದೀಶ್, ಹಳೇಪೇಟೆ ಮಂಜುನಾಥರೆಡ್ಡಿ, ಅಂಬೇಡ್ಕರ್ ಪಾಳ್ಯ ಸಿ.ರವಿ, ದೊಡಮಲದೊಡ್ಡಿ ಶ್ರೀನಾಥರೆಡ್ಡಿ, ಆನಂದ್ ಇದ್ದರು.

