

ಶ್ರೀನಿವಾಸಪುರ: ಜೀವನದಲ್ಲಿ ಬರುವ ನೋವು–ನಲಿವುಗಳಿಗೆ ತಾಳ್ಮೆ ಮತ್ತು ಸಂಯಮವೇ ಆಧಾರ. ಹರುಷಕ್ಕೆ ಹಿಗ್ಗದೆ, ಸಂಕಷ್ಟಕ್ಕೆ ಕುಗ್ಗದೆ ಬದುಕಿದರೆ ಜೀವನದ ಮೌಲ್ಯತೆ ಹೆಚ್ಚುತ್ತದೆ. ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ವಿರೇಂದ್ರ ಹೆಗ್ಗಡೆರವರ ಜೀವನ ನಿಜಕ್ಕೂ ಸಾರ್ಥಕ ಎಂದು ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯೆ ಮಾಯಾ ಬಾಲಚಂದ್ರ ಹೊಗಳಿದರು.
ತಾಲೂಕಿನ ಎನಮೇರಿಪಳ್ಳಿ ಗ್ರಾಮದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿರೇಂದ್ರ ಹೆಗ್ಗಡೆರವರ ಜನ್ಮದಿನದ ಅಂಗವಾಗಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ವಿಶೇಷ ಪೂಜಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ವೇಳೆ ತಾಲೂಕಿನ ಪಿಲ್ಲಕುಂಟೆ ಗ್ರಾಮದಲ್ಲಿರುವ ‘ರೇವಂತ್’ ವೃದ್ಧಾಶ್ರಮದ 20 ಜನ ವೃದ್ಧರಿಗೆ 20 ದಿನಗಳ ಅವಧಿಗೆ ಅಗತ್ಯವಾದ ಬೆಡ್ಶೀಟ್ಗಳು ಹಾಗೂ ಸಿಹಿ ತಿಂಡಿಗಳ ವಿತರಣೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಆಶಾ ಮಹೇಶ್, ತಾ.ಪಂ. ಮಾಜಿ ಸದಸ್ಯ ನಾಗವೇಣ ರೆಡ್ಡಿ, ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯ ವಾಸುದೇವ ಹಾಗೂ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು.

