
ಕುಂದಾಪುರ,ನ.26: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 25 ರಂದು ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಅಲಂಕ್ರತ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು.
ಈ ಪೂಜಾ ವಿಧಿಯನ್ನು ಬಸ್ರೂರು ಫಿಲಿಪ್ ನೇರಿ ಸಿ.ಬಿಎಸ್ ಸಿ ಶಾಲೆಯ ಪ್ರಾಂಶುಪಾಲರದ ವಂ|ಫಾ| ಡ್ಯಾನ್ಸಿ ಮಾರ್ಟಿಸ್ ನಡೆಸಿಕೊಟ್ಟು “ಈ ಪ್ರಪಂಚದಲ್ಲಿ ಎಲ್ಲವೂ ಅನ್ಚಿತ ಆದರೆ ಪವಿತ್ರ ಗ್ರಂಥದಲ್ಲಿ ಬರೆದ ದೇವರ ವಾಕ್ಯಗಳು ಮಾತ್ರ ನಿಚ್ಚಿತವಾಗಿದೆ. ಈ ಪ್ರಪಂಚ ನಶಿಸಿದರೂ, ದೇವರ ವಾಕ್ಯಗಳು ಮಾತ್ರ ನಶಿಸುವುದಿಲ್ಲ. ಬಹಳ ಪುರಾತನ ಈ ಇಗರ್ಜಿಯನ್ನು ರೋಜರಿ ಮಾತೆಗೆ ಸಮರ್ಪಿಸಲ್ಪಟ್ಟಿದೆ, ಅವಳನ್ನು ಮೇರಿ ಮಾತೆ ಎಂದೂ ಕರೆಯುತ್ತಾರೆ, ಮೇರಿ ಮಾತೆ ದೇವರ ವಾಕ್ಯವನ್ನು ಕೇಳಿ ದೇವರ ಚರಣ ದಾಸಿಯದಳು. ನಾವು ಜೇನು ನೊಣಗಳು, ಹೂವುಗಳಿಂದ ಜೇನು ಹಿರಿಸಿ ಗೂಡು ಕಟ್ಟುತ್ತದೆ, ಹಾಗೆ ನಾವು ದೇವರ ವಾಕ್ಯಗಳನ್ನು ಹಿರಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳ ಬೇಕು. ಮೇರಿ ಮಾತೆ ದೇವರ ವಾಕ್ಯಗಳನ್ನು ಮೌನವಾಗಿ ಆಲಿಸಿದಳು, ಆಲಿಸಿ ತನ್ನ ಹ್ರದಯದಲ್ಲಿ ಜೋಪಾನ ಮಾಡಿಟ್ಟುಕೊಂಡು, ಅದರ ಪ್ರಕಾರ ಜೀವಿಸಿದಳು, ಅವಳಂತೆ ನಾವು ಜೀವಿಸಿದರೆ ಸ್ವರ್ಗದ ಕೀರಿಟ ನಮಗೆ ಸಿಗುತ್ತದೆ ಎಂದು ಸಂದೇಶ ನೀಡಿದರು.
ಕುಂದಾಪುರ ಇಗರ್ಜಿಯ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ, ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.
ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಚರ್ಚಿನ ಸದಸ್ಯರು, ನೆಂಟರು ಬಹು ಸಂಖೆಯಲ್ಲಿ ಭಾಗಿಯಾದಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಜನರು ಆಗಮಿಸಿ ಭಾವೈಕತೆ ಮೆರೆದರು.



















































































































