

ಕುಂದಾಪುರ, ನ. 19; ಬಹಳ ವೈಭವದಿಂದ ಆಚರಿಸಲ್ಪಡುವ ಕುಂದಾಪುರದ ಆರಾಧ್ಯ ಶ್ರೀ ಕುಂದೇಶ್ವರನಿಗೆ ಅರ್ಪಿಸುವ ಲಕ್ಷದೀಪೋತ್ಸವಕ್ಕೆ, ಸ್ಥಳೀಯ ಬಹು ಪುರಾತನ ಐತಿಹಾಸಿಕ ಚರಿತ್ರೆಯುಳ್ಳ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಸೌಹಾರ್ದ ಸಮಿತಿಯು ನ, 18 ರಂದು ಸಂಜೆ ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ತೆರಳಿ ಫಲ ಪುಷ್ಪ ನೀಡಿ ಶುಭ ಕೋರಿತು.
ಸೌಹಾರ್ದ ಸಮಿತಿಯ ನೇತ್ರತ್ವವನ್ನು ವಹಿಸಿದ ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ।ಪೌವ್ಲ್ ರೇಗೊ, ಶ್ರೀ ಕುಂದೇಶ್ವರ ಲಕ್ಷದೀಪೋತ್ಸವವುಎಲ್ಲಾ ಧರ್ಮೀಯರ ಬೆಸುಗೆಯಾಗಲಿ, ಎಲ್ಲಾ ಜನರಲ್ಲಿ ಸೌಹಾರ್ದತೆ ಉಂಟು ಮಾಡಲಿ ಎಂದು ಹಾರೈಸುತ್ತೇನೆ. ಈ ಲಕ್ಷದೀಪೋತ್ಸವದ ಸಂದರ್ಭದಲ್ಲಿ, ಜನರ ಹ್ರದಯದಲ್ಲಿರುವ ಅಂದಾಕಾರ ದೂರವಾಗಿ, ಎಲ್ಲರ ಹ್ರದಯದಲ್ಲಿ ಬೆಳಕಾಗಲಿ’ ಎಂದು ಶುಭ ಕೋರುತ್ತೇನೆ ಎಂದು ಹೇಳಿ, ಇದೆ ತಿಂಗಳು 25-26 ರಂದು ನಡೆಯುವ ಕುಂದಾಪುರ ರೋಜರಿ ಮಾತಾ ಚರ್ಚಿನ ತೆರಾಲಿ ಹಬ್ಬಕ್ಕೆ ಬರಬೇಕು ಎಂದು ಪ್ರೀತಿಯಿಂದ ಅಹ್ವಾನಿಸಿದರು.
ಈ ಸಂದರ್ಭದಲ್ಲಿ ಶ್ರೀ ಕುಂದೇಶ್ವರದೇವಸ್ಥಾನದ ಅಧ್ಯಕ್ಷರಾದ ಶ್ರೀ. ಎಸ್. ವಾಸುದೇವ ಯಡಿಯಾಳ, ಆರ್ಚಕರಾದ ರಾಜಶೇಕರ ಮಂಜರು ಬಹಳ ಆತ್ಮೀಯತೆಯಿಂದ ಸೌಹಾರ್ದ ಸಮಿತಿಯನ್ನು ಸ್ವಾಗತಿಸಿ ಅವರಿಂದ ಫಲ ಪುಷ್ಪಗಳನ್ನು ಸ್ವೀಕರಿಸಿದರು. ದೇವಸ್ಥಾನದ ವತಿಯಿಂದಧರ್ಮಗುರು ಅ।ವಂ।ಪೌವ್ಲ್ ರೇಗೊ, ಅವರಿಗೆ ಶಾಲು ಹೊದೆಸಿ ಸನ್ಮಾನಿಸಲಯಿತು. ಈ ಸಂದರ್ಭದಲ್ಲಿ ಚರ್ಚಿನ ಉಪಾಧ್ಯಕ್ಷೆ ಶ್ರೀಮತಿ ಶಾಲೆಟ್ ರೆಬೆಲ್ಲೊ, ಶ್ರೀಮತಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ, ಶ್ರೀಮತಿ ಪ್ರೇಮಾ ಡಿಕುನ್ಹಾ, ಸೌಹಾರ್ದ ಸಮಿತಿಯ ಸಂಚಾಲಕರಾದ್, ರೋಜರಿ ಸೊಸೈಟಿಯ ಅಧ್ಯಕ್ಷ ಶ್ರೀ. ಜೋನ್ಸನ್ ಡಿಆಲ್ಮೇಡಾ, ಕಥೊಲಿಕ್ ಸಭಾದ ಅಧ್ಯಕ್ಷ ಶ್ರೀ. ವಿಲ್ಸನ್ ಡಿ ಆಲ್ಮೇಡಾ, ಕಾರ್ಯದರ್ಶಿ ಶ್ರೀಮತಿ ಶಾಂತಿ ಪಿಂಟೊ, ಸೌಹಾರ್ದ ಸಮಿತಿಯ ಸದಸ್ಯರಾದ ಸಾಹಿತಿ ಪತ್ರಕರ್ತ ಶ್ರೀ. ಬರ್ನಾಡ್ ಡಿಕೋಸ್ತಾ, ಡಾ.ಸೋನಿ ಡಿಕೋಸ್ತಾ, ಶ್ರೀಮತಿ ಶೈಲಾ ಡಿಆಲ್ಮೇಡಾ, ಶ್ರೀ. ಜೋಸೆಫ್ ಡಿಜೋಜಾ, ಶ್ರೀ. ಮೈಕಲ್ ಗೊನ್ಸಾಲ್ವಿಸ್, ಶ್ರೀ. ಆಲ್ವಿನ್ ಆಲ್ಮೇಡಾ, ಕು. ಸಂಗೀತ ಪಾಯ್ಸ್, ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ.ಕೆ ಸತೀಶ್ ಗಾಣಿಗ, ಶ್ರೀ. ಜಿ.ಎಸ್. ಭಟ್, ಶ್ರೀ.ಕೆ. ನಾಗರಾಜ ನಾಯ್ಕ, ಶ್ರೀ. ವಿಠಲ ಕಾಂಚನ್, ಶ್ರೀ. ದಿನೇಶ್, ಶ್ರೀಮತಿ ಉದಯ ಹವಾಲ್ದಾರ್, ಶ್ರೀಮತಿ ಸೀಮಾ ಚಂದ್ರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

















































