

ಪಡುಕೋಣೆ:-ಸಂತ ಅಂತೋನಿ ಚರ್ಚಿನಲ್ಲಿ ದಿನಾಂಕ 9.11.2025 ರಂದು ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರ ದಿನಾಚರಣೆಯನ್ನು ಕ್ರೈಸ್ತ ಶಿಕ್ಷಣ ಭೋದಿಸುವ ಶಿಕ್ಷಕರೆಲ್ಲರೂ ಸೇರಿ ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ವಂ। ಫಾ। ಫ್ರಾನ್ಸಿಸ್ ಕರ್ನೆಲಿಯೊ ರವರು ಹಾಗೂ ಅತಿಥಿಗಳಾಗಿ ಆಗಮಿಸಿದ ವಂ। ಫಾ। ಮನೋಹರ್ ಡಿ’ಸೋಜ ರವರು ದಿವ್ಯಬಲಿ ಪೂಜೆಯನ್ನು ಅರ್ಪಿಸಿದರು. ಕ್ರೈಸ್ತ ಶಿಕ್ಷಣಾ ಭೋದಿಸುವ ಶಿಕ್ಷಕರು ಬಲಿದಾನದ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು. ಕ್ರೈಸ್ತ ಪವಿತ್ರ ಸಭೆಯು ಶಿಕ್ಷಣದ ರೂವಾರಿ ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರ ಪಾಲಕರಾದ ಸಂತ ಚಾರ್ಲ್ಸ್ ಬೊರೊಮಿಯೊರವರ ಹಬ್ಬದ ದಿನದಂದು ಈ ದಿನಾಚರಣೆಯನ್ನು ಆಚರಿಸಲಾಯಿತು.
ಚರ್ಚಿನ ಫಾ। ಫ್ರಾನ್ಸಿಸ್ ಕರ್ನೆಲಿಯೊರವರು ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರನ್ನು ಕುರಿತು ‘ಹೆಚ್ಚಿನ ಶಿಕ್ಷಕರಿಗೆ ಬಿಡುವಿಲ್ಲ. ಆದರೂ ಅವರು ಇಡೀ ವಾರದಲ್ಲಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣನೀಡಿ, ಭಾನುವಾರ ತುಂಬಾ ಉದಾರ ಮನಸ್ಸಿನಿಂದ ಕ್ರೈಸ್ತ ಶಿಕ್ಷಣ ನೀಡಲು, ಹಾಗೂ ಮಕ್ಕಳನ್ನು ಭಾವೈಕ್ಯತೆಯ ಉತ್ತಮ ಕ್ರೈಸ್ತ ಪ್ರಜೆಗಳಾಗಲು ನೀತಿವಂತರಾಗಿ ಬಾಳಲು ಫ್ರೋತ್ಸಾಹಿಸುವರು. ಇಂತಹ ಕ್ರೈಸ್ತ ನೀತಿ ಶಿಕ್ಷಣ ನೀಡುವ ಶಿಕ್ಷಕರನ್ನು ಅಭಿನಂದಿಸುವುದು ನಮ್ಮ ಕರ್ತವ್ಯಯೆಂದು, ಎಲ್ಲ ಶಿಕ್ಷಕರಿಗೆ ಗುಲಾಬಿ ಹೂ ಮತ್ತು ಸಂತರ ಜೀವನ ಚರಿತ್ರೆಯ ಪುಸ್ತಕವನ್ನು ನೀಡಿ,ಗೌರವಿಸಿದರು.













