

ಶ್ರೀನಿವಾಸಪುರ : ತಾಲೂಕಿನ ಮುತ್ತಕಪಲ್ಲಿ ಗ್ರಾಮದಲ್ಲಿನ ಗ್ರಾಮಪಂಚಾಯಿತಿ ಅಧ್ಯಕ್ಷರ ಚುನಾವಣೆ ಗುರುವಾರ ನಡೆದಿದ್ದು, ಅದರಲ್ಲಿ ಗ್ರಾಮ ಗ್ರಾಮಪಂಚಾಯಿತಿ ಕೃಷ್ಣಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ರಾಜೇಶ್ ಮಾಹಿತಿ ನೀಡಿದರು.
ಗ್ರಾಮಪಂಚಾಯತಿಗೆ ಸಂಬಂದಿಸಿದಂತೆ 21 ಸದಸ್ಯರ ಪೈಕಿ 14 ಸದಸ್ಯರು ಹಾಜರಾಗಿ ಉಳಿದವರು ಗೈರುಹಾಜರಾಗಿದ್ದರು. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಶ್ವಿನಿ.ಡಿ ರವರು ರಾಜಿನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ರಾಜಗುಂಡ್ಲಹಳ್ಳಿ ಕೃಷ್ಣಮ್ಮ ರವರು ಅಧ್ಯಕ್ಷಗಾದೆಯು ತೆರೆವಗೊಂಡ ಸ್ಥಾನಕ್ಕೆ ಏಕನಾಮಪತ್ರ ಸಲ್ಲಿಸಿದ್ದು, ನಿಗದಿತ ಸಮಯಕ್ಕೆ ನಾಮಪತ್ರ ಸಲ್ಲಿಸಿ , ನಾಮಪತ್ರ ಅಂಗೀಕೃತವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು , ಮುಂದಿನ ಸಾಲಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆಂದು ಚುನಾವಣಾಧಿಕಾರಿ ಎನ್.ರಾಜೇಶ್ ತಿಳಿಸದರು.
ಇದೇ ಸಮಯದಲ್ಲಿ ಮುಖಂಡ ಹರೀಶ್ರೆಡ್ಡಿ ಮಾತನಾಡಿ ಎಲ್ಲಾ ಸದಸ್ಯರ ಹಾಗು ಮುಖಂಡರ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷರು ಕಾರ್ಯನಿರ್ವಹಿಸಿ ಸರ್ಕಾರ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುವ ವ್ಯವಸ್ಥೆ ಹಮ್ಮಿಕೊಳ್ಳಲಾಗುವುದು ಎಂದರು.
ಪಿಡಿಒ ಚಂದ್ರಪ್ರಕಾಶ್, ಬಿಲ್ಕಲೆಕ್ಟರ್ ನಾಗೇಶ್, ಸದಸ್ಯರಾದ ನಸ್ಸೀಮುನ್ನಿಸಾ, ಸುಶೀಲಮ್ಮ, ಎಂ.ಕೆ.ಸತೀಶ್ಕುಮಾರ್, ರಾಮಕ್ಕ, ಎಂ.ವಿ.ಶ್ರೀನಾಥ, ಚಂದ್ರಕಳಾ, ರಜನಿ.ಕೆ, ಆರ್.ವಿ.ವೆಂಕಟಾಚಲಪತಿ,ಶಾಂತಮ್ಮ, ಗಂಗಿರೆಡ್ಡಿ, ರೆಡ್ಡಿಪ್ರಸನ್ನ, ಜಿ.ಆರ್.ರೆಡ್ಡಪ್ಪ ಮುಖಂಡರಾದ ಕಾರಂಗಿ ರಮೇಶ್, ಎಂ.ಕೆ.ಶ್ರೀನಿವಾಸರೆಡ್ಡಿ, ಎಂ.ಕೆ.ಸತೀಶ್ಕುಮಾರ್, ಶ್ರೀನಾಥ್, ಶಂಕರರಾಜು, ರೆಡ್ಡಪ್ಪರಾಜು, ವೆಂಕಟರಮಣ, ಹರಿನಾಥ್ ಇದ್ದರು.

