

ಕುಂದಾಪುರ,ನ.5: “ಬಡವರಿಗೆ ಶುಭ ವಾರ್ತೆಯನ್ನು ಪ್ರಕಟಿಸಲು ನನಗೆ ಅಭಿಷೇಕ ಮಾಡಲಾಗಿದೆ ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನ ವಾರ್ಷಿಕ ಮಹಾಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ನವೆಂಬರ್ 5 ರಂದು ಆಚರಿಸಲಾಯಿತು.
ಹಬ್ಬದ ಬಲಿದಾನವನ್ನು ನೇಟತ್ರತ್ವವನ್ನು ವಹಿಸಿಕೊಂಡ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅ।ವಂ।ಸ್ಟೀಫನ್ ಡಿಸೋಜಾ ಬಲಿದಾನವನ್ನು ಅರ್ಪಿಸಿ ‘ಈ ಹಬ್ಬದಂದು ಬಡವರಿಗೆ ಶುಭ ವಾರ್ತೆಯನ್ನು ಪ್ರಕಟಿಸಲು “ನನಗೆ ಅಭಿಷೇಕ ಮಾಡಲಾಗಿದೆ” ಎಂಬ ವಿಷಯವಾಗಿದೆ. ಇದು ಏಸು ಸ್ವಾಮಿ ಹೇಳಿದಂತಹ ಮಾತು. ಏಸುವು ದೇವರಾಗಿದ್ದು, ಅವರು ಮಾನವರಿಗಾಗಿ ಮಾನವನಾಗಿ ಜನಿಸಿದನು. ಇಲ್ಲಿ ಅವರು ಬಡವರನ್ನು, ದೀನ ದಲಿತರನ್ನು, ಅನಾಥರನ್ನು ಅತೀಯಾಗಿ ಪ್ರೀತಿಸಿದರು. ಬಡವರಲಿ ಅವರು ಕರುಣೆ ತೋರಿಸಿದರು, ನಾವೂ ಕೂಡ ಹಾಗೆ ಮಾಡಬೆಕು. ಬಡವರಲ್ಲಿ ನಾವು ಕಠಿಣರಾಗಬಾರದು, ಬಡವರಲ್ಲಿ ನಾವು ಉದಾರ ಮನಸಿನವರಾಗೋಣ, ಏಸು ಕ್ರಿಸ್ತರು ಹೇಳಿದ್ದಾರೆ ಬಡವರು ಕೊನೆ ತನಕ ಇದ್ದೆ ಇರುತ್ತಾರೆ. ಬಡವ – ಶ್ರೀಮಂತ ಎಂದು ಬೇಧಭಾವ ತೊರೀಸ ಬೇಡಿ, ಬಡವರಿಗೆ ನೀವು ದಯೆ ತೋರಿದಲ್ಲಿ ನಿಮಗೆ ದೇವರ ಆಶಿರ್ವಾದಗಳು ದೊರೆಯುವುವು” ಎಂದು ಸಂದೇಶ ನೀಡಿದರು.
“ಸಂಭ್ರಮದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನರಾದ ಅ|ವಂ| ಪೌಲ್ ರೇಗೊ ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಪ್ರವೀಣ್ ಪಿಂಟೊ ಬಲಿದಾನದಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಹಬ್ಬದ ಬಲಿಪೂಜೆಯಲ್ಲಿ ಕುಂದಾಪುರ ಸಂತ ಜುಜೆ ವಾಜ್ ವಲಯದ ಎಲ್ಲಾ ಇಗರ್ಜಿಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಕಟ್ಕರೆ ಬಾಲ ಯೇಸುವಿನ ಆಶ್ರಮದ ಧರ್ಮಗುರುಗಳಾದ ಫಾ।ಜೋ ತಾವ್ರೊ, ಫಾ।ಜೋನ್ ಎಫ್. ಸೀಕ್ವೆರಾ, ಫಾ।ಜೊಸ್ವಿ ಸಿದ್ದಕಟ್ಟೆ, ಚರ್ಚಿನ ಉಪಾಧ್ಯಕ್ಷ ತಿಯೋದರ್ ಡಿಮೆಲ್ಲೊ, ಕಾರ್ಯದರ್ಶಿ, ಮರಿಯಾ ಮಸ್ಕರೇನ್ಹಾಸ್ ಆಯೋಗಗಳ ಸಂಯೋಜಕಿ ವಿನೀತಾ ಡಿಆಲ್ಮೇಡಾ ಮತ್ತು ಧರ್ಮಭಗಿನಿಯರು ಹಾಗೂ ಚಚಿನ ಭಕ್ತಾಧಿಗಳು ಬಲಿದಾನದಲ್ಲಿ ಭಾಗಿಯಾಗಿದ್ದರು.
















































































































































