

ಶ್ರೀನಿವಾಸಪುರ : ಇದೊಂದು ದೇಶಕ್ಕೆ ಅವಮಾನೀಯವಾದ ಘಟನೆ. ಈ ಘಟನೆಯು ಇಡಿ ದೇಶದಲ್ಲಿನ ಪ್ರಜೆಗೂ ನಡೆದಿರುವ ಅವಮಾನ. 17 ರಂದು ಕೋಲಾರ ಬಂದ್ಗೆ ಕರೆಕೊಟ್ಟಿದ್ದು, ಎಲ್ಲ ಸಮಾನಮನಸ್ಕರು ಕೈಜೋಡಿಸಿ ಬಂದ್ ಯಶ್ವಸಿಗೊಳಿಸಬೇಕಾಗಿ ರಾಜ್ಯ ದಲಿತ ಸಂಘಟನೆ ಹಿರಿಯ ಮುಖಂಡ ಎನ್.ಮುನಿಸ್ವಾಮಿ ಮನವಿ ಮಾಡಿದರು.
ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ವಿವಿಧ ಸಂಘಟನೆಗಳಿಂದ ಜಿಲ್ಲಾ ಬಂದ್ ವಿಚಾರವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಸೂರ್ಯನಾರಾಯಣ ಮಾತನಾಡಿ ಸರ್ವೋಚ್ಚ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ಖಂಡನೀಯ. ಇಂದು ದೇಶದಲ್ಲಿ ಸಂವಿದಾನ ಹಕ್ಕು ದಮನ ಆಗುತ್ತಿದೆ ವಿóಷಾದ ವ್ಯಕ್ತಪಡಿಸಿದರು. ಇಂದು ನಾವೆಲ್ಲೂರು ಸೇರಿ ಸಂವಿದಾನ ರಕ್ಷಣೆ ಮಾಡಬೇಕಿದೆ . ಈ ಹಿನ್ನಲೆಯಲ್ಲಿ ಬಂದ್ಗೆ ಎಲ್ಲಾ ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸರ್ವೋಚ್ಚ ನ್ಯಾಯಾಲದ ನ್ಯಾಯಾಧೀಶರ ಮೇಲೆ ವಕೀಲರೊಬ್ಬರು ಶೂ ಎಸೆದಿರುವುದು ಖಂಡನೀಯ ಈ ಘಟನೆಯು ಇಡಿ ದೇಶಕ್ಕೆ ಅಪಮಾನವಾಗಿದೆ ಅ.17 ರಂದು ಕೋಲಾರ ಬಂದ್ಗೆ ನಮ್ಮ ಬೆಂಬಲವಿದೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಹೇಳಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿದರು. ಮುಖಂಡರಾದ ಡಾ|| ಚಂದ್ರಕಳಾ ಶ್ರೀನಿವಾಸನ್, ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ , ಪ್ರಭಾಕರಗೌಡ , ಚಲಪತಿ, ಬೈರಾರೆಡ್ಡಿ, ನಾಗ್ದೇನಹಳ್ಳಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಮುಳಬಾಗಲಪ್ಪ, ಖದ್ರಿನರಸಿಂಹ, ಕಲ್ಲೂರು ವೆಂಕಟೇಶ್, ಕೂಸ್ಸಂದ್ರ ರೆಡ್ಡಪ್ಪ, ನರಸಿಂಹಮೂರ್ತಿ, ಪಾತಕೋಟೆ ನವೀನ್ಕುಮಾರ್ , ರಾಧಮ್ಮ, ಮಂಜುಳ, ಕೆ.ಮೋಹನಾಚಾರಿ, ಕೆ.ಎಲ್.ಕಾರ್ತಿಕ್, ಸಾದಿಕ್ಅಹಮ್ಮದ್ ಇದ್ದರು.

